Share this news

ಸುರತ್ಕಲ್: ಮಂಗಳವಾರ ನಡುರಾತ್ರಿ ಸುರತ್ಕಲ್‌ನ ಸಮುದ್ರ ತೀರದಲ್ಲಿ ಬೀಸಿದ ಭಾರಿ ಸುಂಟರಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಕುಲಾಯಿ ಪ್ರದೇಶದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.


ಇಂದು ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ಎಂಬವರು ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಅದನ್ನ ತುಳಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಮೀಪದ ನಾರಾಯಣ ಮೂಲ್ಯ ಎಂಬವರ ಮನೆಯ ಮೇಲೆ ಬೃಹತ್ ಮರದ ಗೆಲ್ಲೊಂದು ಬಿದ್ದು ಹಾನಿ ಸಂಭವಿಸಿದೆ. ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲು ಒಂದು ಭಾಗ ಸಿಲುಕಿಕೊಂಡ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಸುಂಟರಗಾಳಿಗೆ ವಿವಿಧಡೆ ಮರಗಳು ಉರುಳಿ ಬಿದ್ದಿದ್ದು, ಮನೆಯ ಛಾವಣಿ ಶೀಟುಗಳು ಹಾರಿ ಅಪಾರ ನಷ್ಟ ಸಂಭವಿಸಿದೆ.


ಇನ್ನೊAದೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೂರಿಂಜೆಯ ಹಿದಾಯತ್ ಸ್ಕೂಲ್ ಕಂಪೌAಡ್ ಕುಸಿದು ಬಿದ್ದಿದೆ. ಗೋಡೆ ಕುಸಿದ ರಭಸಕ್ಕೆ ಕಲ್ಲುಗಳು ರಸ್ತೆಗೆ ಉರುಳಿ ಬಿದ್ದಿವೆ. ಸ್ಥಳೀಯರು ರಸ್ತೆಗೆ ಬಿದ್ದ ಕಲ್ಲುಗಳ ತೆರವು ಕಾರ್ಯ ನಡೆಸಿದ್ದಾರೆ.
ಬೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *