ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರೀತ್ಯಗಳಿಂದ ರಕ್ಷಣೆ ನೀಡುವ ಸಲುವಾಗಿ ಪ್ರಾರಂಭಿಸಲಾದ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರಾದ ಶ್ರೀನಿವಾಸ್ ಬಿ.ವಿ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕಗಳಾಗಿ ಗುರುತಿಸಿದ್ದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಜಿಲ್ಲಾ ತಾಂತ್ರಿಕ ಸಮಿತಿಯು ನಿಗದಿಪಡಿಸಿದ ಟರ್ಮ್ ಶೀಟ್ಗಳ ಆಧಾರದಲ್ಲಿ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ರವರು ನಿರ್ವಹಿಸುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳು ಹಾಗೂ ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನ ದತ್ತಾಂಶಗಳ ಆಧಾರದಲ್ಲಿ ವಿಮೆ ಮರು ಪಾವತಿ ಆಗಲಿದೆ.
ಕಾರ್ಕಳ ತಾಲೂಕಿನಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆಗೆ ಅವಕಾಶವಿದ್ದು ಜುಲೈ-01, 2023 ರಿಂದ ಜೂನ್ 30, 2024ರ ಅವಧಿವರೆಗೆ ವಿಮಾ ರಕ್ಷಣಾ ಅವಧಿ ಇದ್ದು ವಿಮಾ ಮೊತ್ತವು ಸದರಿ ಬೆಳೆಗೆ ಜಿಲ್ಲೆಯಲ್ಲಿ ನಿಗದಿಗೊಳಿಸಲಾದ ಬೆಳೆ ಸಾಲದ ಮೊತ್ತ (ಅಡಿಕೆ ರೂ. 128000/- ಪ್ರತಿ ಹೆಕ್ಟೇರ್‌ಗೆ ಹಾಗೂ ಕಾಳುಮೆಣಸು ರೂ. 47000/- ಪ್ರತಿ ಹೆಕ್ಟೇರ್ಗೆ) ಗಳಾಗಿರುತ್ತದೆ. ಬೆಳೆ ವಿಮೆ ಮಾಡಿಸುವ ರೈತರು ವಿಮಾ ಮೊತ್ತದ ಶೇ. 5 ರಷ್ಟು ನ್ನು (ಅಡಿಕೆ- ರೂ 6400/- ಹೆಕ್ಟೇರ್ಗೆ ಹಾಗೂ ಕಾಳುಮೆಣಸು ರೂ. 2350/- ಹೆಕ್ಟೇರ್) ವಿಮಾ ಪ್ರೀಮಿಯಂ ಆಗಿ ಪಾವತಿಸಬೇಕಿರುತ್ತದೆ. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರುಗಳು ವಿಮೆಗೆ ನೊಂದಾಯಿಸಬಹುದಾಗಿದ್ದು ಬೆಳೆ ಸಾಲ ಪಡೆಯದ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆಧಾರ್ ಕಾರ್ಡಿನ ಪ್ರತಿ ಹಾಗೂ ಬೆಳೆ ಬೆಳೆದಿರುವ ಬಗ್ಗೆ ಸ್ವಯಂ ಘೋಷಣೆ ಗಳೊಂದಿಗೆ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ಗಳಲ್ಲಿ ಉಚಿತವಾಗಿ ನೊಂದಾಯಿಸಿಕೊಳ್ಳಬಹುದು.
ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಬ್ಯಾಂಕ್ ಶಾಖೆಗಳು ಯೋಜನೆಯಡಿ ಒಳಪಡಿಸಬೇಕಾಗಿದ್ದು ಬೆಳೆ ಸಾಲದ ಮೊತ್ತಕ್ಕೆ ರೈತರ ವಿಮಾ ಕಂತನ್ನು ಹೆಚ್ಚುವರಿಯಾಗಿ ಮಂಜೂರು ಮಾಡತಕ್ಕದ್ದು, ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದಲ್ಲಿ ವಿಮೆ ನೋಂದಣಿಗೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿAತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿರಬೇಕು ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯು ಹವಾಮಾನ ಆಧಾರಿತವಾಗಿ ಕಾರ್ಯನಿರ್ವಹಿಸುವುದಿದ್ದು, ಆಲಿಕಲ್ಲು ಮಳೆ ಅಥವಾ ಮೇಘ ಸ್ಪೋಟಗಳ ಸಂಧರ್ಭಗಳಲ್ಲಿ ಮಾತ್ರ ವೈಯಕ್ತಿಕ ನಷ್ಟ ನಿರ್ಧರಣೆ ಹಾಗೂ ವಿಮಾ ಮೊತ್ತ ಪಾವತಿಗೆ ಅವಕಾಶವಿರುತ್ತದೆ. ವಿಮಾ ಅವಧಿ ಮುಗಿದ ನಂತರ ವಿಮೆ ಮೊತ್ತ ಪಾವತಿ ಸಂಧರ್ಭದಲ್ಲಿ 2023 ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆ ಹಾಗೂ ವಿಸ್ತೀರ್ಣದೊಂದಿಗೆ ರೈತರು ವಿಮೆಗೆ ನೊಂದಾಯಿಸಿರುವ ಬೆಳೆ ಹಾಗೂ ಬೆಳೆ ವಿಸ್ತೀರ್ಣ ಹೊಲಿಕೆ ಮಾಡುವುದುರಿಂದ ಬೆಳೆ ವಿಮೆ ಮಾಡಿಸಿದ ಬೆಳೆಗಳನ್ನು ಬೆಳೆ ಸಮೀಕ್ಷೆ ಸಂಧರ್ಭದಲ್ಲಿ ಸರಿಯಾಗಿ ಧಾಖಲಿಸುವ ಬಗ್ಗೆ ರೈತರು ಮುತುವರ್ಜಿವಹಿಸುವುದು. ವಿಮೆ ಮಾಡಿಸುವ ರೈತರು FRUITS ತಂತ್ರಾAಶದ ನೋಂದಣಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಪಡೆದು ವಿಮೆಯಡಿ ಪಾಲ್ಗೊಳ್ಳಬಹುದಾಗಿದೆ. ಈ ಮೇಲಿನ ಮರು ವಿನ್ಯಾಸಗೊಳಿಸುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮಾ ನೊಂದಣಿಗೆ ಜುಲೈ.15 ಕೊನೆಯ ದಿನಾಂಕವಾಗಿದ್ದು, ರೈತರು ತಮ್ಮ ವಿಮಾ ಪ್ರಸ್ತಾವನೆಯ ಸ್ಥಿತಿಗತಿಗಳನ್ನು www.samrakshane. Karnataka.gov.in ಅನ್ಲೈನ್ ಪೋರ್ಟಲ್ನಲ್ಲಿ Check status ಅಡಿ ವಿಕ್ಷೀಸಬಹುದಾಗಿದೆ ಎಂದು ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.