Share this news

ಕಾರ್ಕಳ: ದನವನ್ನು ಹುಡುಕಿಕೊಂಡು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನಡಾಯಿಪಲ್ಕೆ ಎಂಬಲ್ಲಿ ನಡೆದಿದೆ. ನಲ್ಲೂರಿನ ಬೇಬಿ ಶೆಟ್ಟಿ(57) ಎಂಬವರು ಮೃತಪಟ್ಟ ಮಹಿಳೆ

ಬೇಬಿ ಶೆಟ್ಟಿ ಜು.7 ರ ಶುಕ್ರವಾರ ಮದ್ಯಾಹ್ನ 3 ಘಂಟೆ ವೇಳೆಯಲ್ಲಿ ದನ ಹುಡುಕಿಕೊಂಡು ಹೋಗಿದ್ದಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಹೊಳೆಯಲ್ಲಿ ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *