Share this news

ಬೆಂಗಳೂರು : ರಾಜ್ಯ ಸರ್ಕಾರದ ಗೃಹಜ್ಯೋತಿ ಈಗಾಗಲೇ ಸುಮಾರು 1.3 ಕೋಟಿ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯಾದ ನಂತರ ಅದಕ್ಕೆ ಸರ್ಕಾರ ಒಪ್ಪಿಗೆ ಕೊಟ್ಟಿದೆಯೇ ಇಲ್ಲವೇ ಎಂಬುದರ ಬಗ್ಗೆ (ಅರ್ಜಿಯ ಸ್ಥಿತಿ) ತಿಳಿದುಕೊಳ್ಳಲು ಸರ್ಕಾರದಿಂದ ಪ್ರತ್ಯೇಕ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದೆ. ಅರ್ಜಿದಾರರು ತಮ್ಮ ಮೊಬೈಲ್‌ನಲ್ಲಿಯೇ ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಈವರೆಗೆ ರಾಜ್ಯಾದ್ಯಂತ 1.3 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮತ್ತೊಂದೆಡೆ ಸುಮಾರು 8 ಸಾವಿರಕ್ಕೂ ಅಧಿಕ ಜನರು ಎರಡು ಅಥವಾ ಅದಕ್ಕಿಂತ ಹೆಚ್ಚುಬಾರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಎಲ್ಲರೂ ತಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಲು ಅನುಕೂಲ ಆಗುವಂತೆ ಸರ್ಕಾರದಿಂದ ಪ್ರತ್ಯೇಕ ಲಿಂಕ್ ನೀಡಲಾಗಿದೆ.

ಸರ್ಕಾರದಿಂದ ಬಿಡುಗಡೆ ಮಾಡಲಾದ https://sevasindhu.karnataka.gov.in/StatucTrack/Track_Status ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದವರು ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ತಮ್ಮ ಅರ್ಜಿಯನ್ನು ಸರ್ಕಾರದಿಂದ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದಲ್ಲಿ ‘Gruhajyothi scheme your application successful’ ಎಂದು ತೋರಿಸಲುತ್ತದೆ. ಇಲ್ಲವಾದಲ್ಲಿ ‘your application for Gruhajyothi scheme is received and sent to ESCOM for processing’ ಎಂದು ತೋರಿಸುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದಲ್ಲಿ ‘your application rejected’ ಎಂದು ತೋರಿಸುತ್ತದೆ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದರೂ ನಾವು ಅಂಗೀಕಾರ ರಶೀದಿ ಅಥವಾ ಸ್ವೀಕೃತಿ ಪತ್ರವನ್ನು (Acknowledgement) ಡೌನ್‌ಲೋಡ್‌ ಮಾಡಿಕೊಂಡಿಲ್ಲ ಎಂದಾದಲ್ಲಿ ಕೂಡಲೇ ಸರ್ಕಾರದಿಂದ ಕೊಡಲಾಗ ಈ ಲಿಂಕ್‌ನ್ನು https://sevasindhu.karnataka.gov.in/gruhajyothi_print/login ಕ್ಲಿಕ್‌ ಮಾಡಿ ಅರ್ಜಿಯ ಸ್ವೀಕೃತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇನ್ನು ಸರ್ಕಾರದ ಗೃಹಜ್ಯೋತಿ ಯೋಜನೆ ಸೇರಿದಂತೆ ಎಲ್ಲಾ ಖಾತರಿ ಯೋಜನೆಗಳ ಅರ್ಜಿ ಸಲ್ಲಿಸುವ ಕುರಿತಾಗಿ ಹಾಗೂ ತಾಂತ್ರಿಕ ಸಹಾಯಕ್ಕಾಗಿ ಅರ್ಜಿದಾರರು ಸರ್ಕಾರದ ದೂರವಾಣಿ ಸಂಖ್ಯೆ 08022279954 / 8792662814 / 8792662816 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯನ್ನು ಜುಲೈ 2023 ರ ತಿಂಗಳು ವಿದ್ಯುತ್ ಬಳಕೆಗೆ ಆಗಸ್ಟ್ 2023 ರ ತಿಂಗಳಿAದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಕೆಲವು ಷರತ್ತುಗಳೊಂದಿಗೆ ಸರ್ಕಾರ ಜಾರಿಗೆ ತರುತ್ತಿದೆ.

Leave a Reply

Your email address will not be published. Required fields are marked *