ಕಾರ್ಕಳ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೆಕೋಡಿ ಗ್ರಾಮದ ಜೈನ ಮುನಿ ಕಾಮಕುಮಾರ ನಂದಿ ಮುನಿಗಳ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕಾರ್ಕಳ ಜೈನ ಮಠದ ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಕರ್ನಾಟಕ ಜೈನ ಯುವ ಪೊರೋಹಿತ ಬಳಗದ ವತಿಯಿಂದ ಕಾರ್ಕಳ ತಹಶಿಲ್ದಾರ್ ಅನಂತಶಂಕರ ಅವರಿಗೆ ಮನವಿ ಸಲ್ಲಿಸಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ಜೈನ್ ಮಿಲನ ಅಧ್ಯಕ್ಷೆ ಮಾಲತಿ ವಸಂತ್ ರಾಜ್, ಉಪಾಧ್ಯಕ್ಷ ಅಶೋಕ್ ಹೆಚ್.ಎಂ, ವಲಯ ಸಹ ಕಾರ್ಯದರ್ಶಿ ಶಶಿಕಲಾ ಹೆಗ್ಡೆ, ಮಹಾವೀರ ಹೆಗ್ಡೆ, ಶೀತಲ್ ಜೈನ್, ಭರತ್ ಕುಮಾರ್ ಜೈನ್, ನೇಮಿರಾಜ ಆರಿಗ ಮತ್ತಿತರರು ಉಪಸ್ಥಿತರಿದ್ದರು.

