Share this news

ಬೆಂಗಳೂರು: ಆಶಾ ಕಾರ್ಯಕರ್ತೆಯರ ಸೇವೆಯನ್ನು ಖಾಯಂಗೊಳಿಸಲು ಅಸಾಧ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಿರುವ ನಿಯಮಾವಳಿ ಪ್ರಕಾರ ಆಶಾ ಕಾರ್ಯಕರ್ತರ ಸೇವೆಯನ್ನು ಖಾಯಂ ಮಾಡಲು ಬರುವುದಿಲ್ಲ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೂರ್ಣಾವಧಿ ಅಥವಾ ಅರೆಕಾಲಿಕ ನೌಕರರಲ್ಲ. ಆದರೆ ಅವರಿಗೆ ಕಾರ್ಯನಿರ್ವಹಣೆ ಆಧಾರದ ಮೇಲೆ ಗೌರವ ಧನ ಹಾಗೂ ಪೋತ್ಸಾಹ ಧನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ರಾಜ್ಯಕ್ಕೆ 42,524 ಆಶಾ ಕಾರ್ಯಕರ್ತೆಯರ ಹುದ್ದೆಗಳು ಮಂಜೂರಾಗಿದ್ದು, ಇವರಿಗೆ ರಾಜ್ಯ ಸರ್ಕಾರದಿಂದ ನಿಶ್ಚಿತ ಮಾಸಿಕ ಗೌರವ ಐದು ಸಾವಿರ ರು. ನೀಡಲಾಗುತ್ತದೆ. ಉಳಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬರುವ 40 ಚಟುವಟಿಕೆಗಳ ಕಾರ್ಯನಿರ್ವಹಣೆಯಿಂದ 5ರಿಂದ 8 ಸಾವಿರ ರು. ಪ್ರೋತ್ಸಾಹ ಧನ ಸಿಗುತ್ತದೆ. ಒಟ್ಟಾರೆ ಮಾಸಿಕ 10ರಿಂದ 13 ಸಾವಿರ ರು. ದೊರೆಯುತ್ತದೆ. ಆಶಾ ಕಾರ್ಯಕರ್ತೆಯರಿಗೆ ವಿವಿಧ ಚಟುವಟಿಕೆ ಅಡಿ ಸ್ಮಾರ್ಟ್ ಫೋನ್‌ ಹಾಗೂ ರೀಚಾರ್ಜ್ ಮೊತ್ತವನ್ನು ಕೊಡುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದರು.

 

Leave a Reply

Your email address will not be published. Required fields are marked *