ನವದೆಹಲಿ:ದೈನಂದಿನ ಹಣಕಾಸು ವಹಿವಾಟುಗಳಲ್ಲಿ ಬ್ಯಾಂಕುಗಳು ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆನ್ಲೈನ್,ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಹೊರತಾಗಿಯೂ ಬ್ಯಾಂಕುಗಳಿಗೆ ಬರುವ ಗ್ರಾಹಕರ ಸಂಖ್ಯೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.ಈ ಹಿಂದೆ ವಾರದ 6 ದಿನ ಕಾರ್ಯಾಚರಿಸುತ್ತಿದ್ದ ಬ್ಯಾಂಕುಗಳು ಇನ್ನು ವಾರದ 5 ದಿನ ಮಾತ್ರ ತೆರೆಯಲಿದ್ದು ವಾರದ ಎರಡು ದಿನ ಬ್ಯಾಂಕುಗಳಿಗೆ ರಜೆ ನೀಡಲು ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಶನ್ ನಿರ್ಧರಿಸಿದೆ. ಈ ಕುರಿತು ಜುಲೈ 28 ರಂದು ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಹಾಗೂ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಜುಲೈ 19 ರಂದು ಐದು ಬ್ಯಾಂಕಿಂಗ್ ದಿನಗಳನ್ನು ಪರಿಚಯಿಸುವ ವಿಷಯವನ್ನು ಹಿಂದಿನ ಚರ್ಚೆಯಲ್ಲಿ ತೆಗೆದುಕೊಂಡಿತ್ತು.ಭಾರತೀಯ ಬ್ಯಾಂಕಿಂಗ್ ಒಕ್ಕೂಟದ ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ.
ಬಹುತೇಕ ಗ್ರಾಮೀಣ ಪ್ರದೇಶಗಳ ಗ್ರಾಹಕರು ಮೊಬೈಲ್ ಬ್ಯಾಂಕಿAಗ್ ಸೇವೆಯನ್ನು ಬಳಸಿಕೊಳ್ಳುವಷ್ಟು ಪರಿಣಿತಿ ಪಡೆಯದ ಹಾಗೂ ಹಲವೆಡೆ ನೆಟ್ ವರ್ಕ್ ಸಮಸ್ಯೆಯಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪಡೆಯಲು ಸಾಧ್ಯವಾಗದ ಕಾರಣದಿಂದಾಗಿ ತಮ್ಮ ದೈನಂದಿನ ವ್ಯವಹಾರಗಳಿಗೆ ಬ್ಯಾಂಕುಗಳನ್ನೇ ಅವಲಂಬಿಸುತ್ತಾರೆ. ಬ್ಯಾಂಕಿAಗ್ ಒಕ್ಕೂಟದ ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಗ್ರಾಹಕರು ವಹಿವಾಟು ನಡೆಸಲಾಗದೇ ಪರಡಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗಿದೆ