ಕಾರ್ಕಳ: ಕಳೆದ ಎರಡು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾರ್ಕಳ ತಾಲೂಕಿನ ಹಲವೆಡೆ ಮನೆಗಳಿಗೆ ಮರ ಬಿದ್ದು ಹಾನಿಯಾಗಿದ್ದು ಬಾರಿ ಪ್ರವಾಹದಿಂದ ಭತ್ತದ ಕೃಷಿ ಅಡಿಕೆ ತೋಟ ಜಲಾವೃತಗೊಂಡಿದೆ.
ಕಾರ್ಕಳ ತಾಲೂಕಿನ ಬೋಲಾ ಗ್ರಾಮದ ರಮೇಶ್ ನಾಯಕ್ ರವರ ಅಂಗಡಿಯ ಚಾವಣಿಯ ಸೀಟುಗಳು ಗಾಳಿಗೆ ಹಾರಿಹೋಗಿದ್ದು ಸುಮಾರು 10000 ನಷ್ಟ ಸಂಭವಿಸಿದೆ ಗ್ರಾಮದ ವೆಂಕಟಪ್ಪ ಸೇರ್ವೇಗಾರ್ ಎಂಬವರ ಮನೆಗೆ ಮರ ಬಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿದೆ ನಿಂಜೂರು ಗ್ರಾಮದ ಶ್ರೀನಿವಾಸ ನಾಯಕ್ ಎಂಬವರ ಮನೆಯ ಮೇಲೆ ಮರ ಬಿದ್ದು ಸುಮಾರು 40 ಸಾವಿರ ನಷ್ಟ ಸಂಭವಿಸಿದೆ
ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿನ ಸೀತಾ ಶೆಟ್ಟಿ ಎಂಬವರ ಮನೆಯ ಚಾವಣಿಯ ಹಂಚುಗಳು ಹಾರಿ ಹೋಗಿದ್ದು 6000 ನಷ್ಟ ಸಂಭವಿಸಿದೆ ಪಳ್ಳಿ ಗ್ರಾಮದ ಕರುಮನೆ ಎಂಬಲ್ಲಿನ ಶಂಕರ್ ಎಂಬವರ ಮನೆಗೆ ಮರ ಬಿದ್ದು ಸುಮಾರು 45000 ನಷ್ಟ ಸಂಭವಿಸಿದೆ
ಕಾರ್ಕಳ ಪುರಸಭಾ ವ್ಯಾಪ್ತಿಯ ದಾನಶಾಲೆ ಎಂಬಲ್ಲಿ ಜಲಜ ಶೆಟ್ಟಿ ಅವರ ಮನೆಗೆ ಮರ ಬಿದ್ದು ಸುಮಾರು 50,000 ನಷ್ಟ ಸಂಭವಿಸಿದೆ
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರದ ಭರವಸೆ ನೀಡಿದ್ದಾರೆ