ಮೂಡಬಿದಿರೆ: ವಿದ್ಯಾರ್ಥಿಗಳ ಸಾಹಿತ್ಯಾಭ್ಯಾಸ ಮತ್ತು ಸಾಹಿತ್ಯಾಭ್ಯಾಸದ ವೈಶಿಷ್ಟ್ಯಗಳಾದ ನೇರ ಹಾಗೂ ಸರಳ ಗ್ರಹಿಕೆ, ಭಾಷಾ ಸಾಮರ್ಥ್ಯ ಅಭಿವೃಧ್ಧಿ ಅಂಶಗಳ ಉತ್ತೇಜನ, ಸಾಮಾಜಿಕ ರಾಷ್ಟ್ರೀಯ ಹೊಣೆಗಾರಿಕೆ ಅರಿತುಕೊಳ್ಳಲು ಪತ್ರಿಕೆಗಳು ವೇದಿಕೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾ ಸ್ವಾಮೀಜಿ ಹೇಳಿದರು.
ಅವರು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಮಾಸ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಲಿಕೆಯೊಂದಿಗೆ ನೈತಿಕ ಮೌಲ್ಯಗಳ ಅಳವಡಿಕೆ ವಿಶಾಲ ದೃಷ್ಠಿಕೋನ, ಪರಿಸರ ಪ್ರಜ್ಞೆ ರಾಷ್ಟ್ರಾಭಿಮಾನದ ಮೂಲಕ ಈ ಪತ್ರಿಕೆಯ ಮೂಲಕ ಸತ್ಯದ ಸಾಕ್ಷಾತ್ಕಾರವಾಗಲಿ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕರ್ಯದರ್ಶಿ ರಶ್ಮಿತಾ ಜೈನ್ ಕಾರ್ಯದರ್ಶಿಗಳಾದ ಮಾತೃಶ್ರೀ ಮನೋರಮಾ ರಾಜರತ್ನ ಜೈನ್, ಶ್ರೀ ರಾಜರತ್ನ ಜೈನ್, ಮಂಜುಳಾ ಅಭಯಚಂದ್ರ ಜೈನ್, ಸಂಪಾದಕರಾದ ಡಾ| ಸಂಪತ್ ಕುಮಾರ್, ಉಪಸ್ಥಿತರಿದ್ದರು.