ಕ್ಯಾಲಿಫೋರ್ನಿಯಾ : ಜನಪ್ರಿಯ ಮೈಕ್ರೋಬ್ಲಾಗಿಂಗ್ ಮತ್ತು ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಅನ್ನು ತೆಕ್ಕೆಗೆ ಪಡೆದುಕೊಂಡ ಬಳಿಕ ಎಲಾನ್ ಮಸ್ಕ್ ಈ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದ್ದಾರೆ. ಈ ಹಿಂದೆ ಟ್ವಿಟ್ಟರ್‌ನಲ್ಲಿ ಹೊಸ ಫೀಚರ್‌ಗಳನ್ನು ತಂದು ನೂತನ ರೂಪ ನೀಡಿದ್ದ ಮಸ್ಕ್ ಇದೀಗ ಅತಿ ದೊಡ್ಡ ಬದಲಾವಣೆ ಮಾಡಿದ್ದು, ಹೊಸ ಲೋಗೋ ಬಿಡುಗಡೆ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಇದೀಗ ನೀಲಿ ಹಕ್ಕಿಯ ಲಾಂಛನದ ಬದಲಾಗಿ ಕಪ್ಪು ಅಕ್ಷರದಲ್ಲಿ ಎಕ್ಸ್ ಎಂದು ಬರೆದಿರುವ ಲೋಗೋ ಕಾಣಿಸುತ್ತಿದೆ. ಮಸ್ಕ್ ಭಾನುವಾರವಷ್ಟೆ, ಸದ್ಯದಲ್ಲೇ ಟ್ವಿಟ್ಟರ್ ಲೋಗೋ ಬದಲಾವಣೆ ಆಗಲಿದೆ ಎಂದು ಹೇಳಿದ್ದರು. ಬಳಿಕ ಒಂದೇ ದಿನದಲ್ಲಿ ನೂತನ ಲೋಗೋ ಬಿಡುಗಡೆ ಮಾಡಿರುವುದು ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ.