ಕಾರ್ಕಳ: ನಿರಂತರ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕಾರ್ಕಳ ತಾಲೂಕಿನ ಹಲವೆಡೆ ಮನೆಗಳು ಕುಸಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ
ಮರ್ಣೆ ಗ್ರಾಮದ ಕುರ್ಪಾಡಿ ಎಂಬಲ್ಲಿನ ಶಶಿಕಲಾ ಶೆಟ್ಟಿ ಎಂಬವರ ಮನೆಯ ಗೋಡೆ ಭಾರೀ ಮಳೆಗೆ ಭಾಗಶಃ ಕುಸಿದಿದ್ದು ಸುಮಾರು 50 ಸಾವಿರ ನಷ್ಟ ಸಂಭವಿಸಿದೆ.
ಮಾಳ ಗ್ರಾಮದ ಮುಗ್ಗೇರ್ಕಳ ನಿವಾಸಿ ಅಂತು ಮೇರ ಎಂಬವರ ಮನೆಯ ಮೇಲ್ಚಾವಣಿ ಹಾನಿಯಾಗಿದ್ದು ಸುಮಾರು 50 ಸಾವಿರ ನಷ್ಟ, ಹಾಗೂ ಮುಗ್ಗೇರ್ಕಳ ಶಾರದಾ ಎಂಬವರ ಮನೆಯ ಮೇಲ್ಚಾವಣಿ ಕುಸಿದಿದ್ದು 50 ಸಾವಿರ ನಷ್ಟ ಸಂಭವಿಸಿದೆ.
ಭಾರಿ ಮಳೆಯ ಪರಿಣಾಮವಾಗಿ ಮುಂಡ್ಕೂರು ಗ್ರಾಮದ ಕೃಷ್ಣಪ್ಪ ಪೂಜಾರಿ ಎಂಬವರ ಅಡಿಕೆ ತೋಟ ಹಾಗೂ ಭತ್ತದ ಗದ್ದೆ ಜಲಾವೃತವಾಗಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿದೆ.
ಭಾರಿ ಗಾಳಿ ಮಳೆಗೆ ಇರುವತ್ತೂರು ಗ್ರಾಮದ ಐತು ಮೂಲ್ಯ ಎಂಬವರ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ಬೋಳ ಗ್ರಾಮದ ಜಯರಾಮ ಸಾಲಿಯನ್ ಎಂಬುವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ನೀರೆ ಗ್ರಾಮದ ಪ್ರೇಮ ಪೂಜಾರಿ ಎಂಬ ಮನೆಗೆ ಮರ ಬಿದ್ದ ಪರಿಣಾಮ 10 ಸಾವಿರ ನಷ್ಟ ಸಂಭವಿಸಿದೆ. ಎರ್ಲಪಾಡಿ ಗ್ರಾಮದ ಲತಿಕಾ ಎಂಬರ ಭತ್ತದ ಗದ್ದೆಗೆ ಪ್ರವಾಹದ ನೀರು ನುಗ್ಗಿ 20 ಸಾವಿರ ನಷ್ಟ ಸಂಭವಿಸಿದೆ. ಬೆಳ್ಮಣ್ ಗ್ರಾಮದ ಪುನಾರು ವೈಷ್ಣವಿ ನಾಯಕ್ ಎಂಬುವರ ಮನೆ ಹಂಚುಗಳು ಗಾಳಿಗೆ ಹಾರಿ ಹೋಗಿದ್ದು ಸುಮಾರು 10 ಸಾವಿರ ನಷ್ಟ ಸಂಭವಿಸಿದೆ.
ಕಳೆದ 15 ದಿನಗಳಿಂದ ಕಾರ್ಕಳ ತಾಲೂಕಿನ ಅತ್ಯಂತ ಭಾರಿ ಗಾಳಿ ಮಳೆಯ ಪರಿಣಾಮವಾಗಿ ಮನೆಗಳು ಹಾಗೂ ಕೃಷಿ ಜಮೀನುಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದ್ದು ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ