ಉಡುಪಿ : ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಿಸಿದ ಪ್ರಕರಣದಲ್ಲಿ ಮೂರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈಗಾಗಲೇ ಕಾಲೇಜು ಆಡಳಿತ ಮಂಡಳಿ ಮೂರು ಮೊಬೈಲ್‌ಗಳನ್ನು ಪೊಲೀಸ್ ವಶಕ್ಕೆ ನೀಡಿದೆ. ಆದರೆ ಮೊಬೈನ್‌ನಲ್ಲಿ ಏನೂ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು, ಮೊಬೈಲ್‌ಗಳನ್ನು ಬೆಂಗಳೂರು ಎಸ್‌ಎಸ್‌ಎಲ್‌ಗೆ ಕಳುಹಿಸಲಿದ್ದಾರೆ. ಮೊಬೈಲ್ ನಲ್ಲಿ ದಾಖಲಾಗಿರುವ ಎಲ್ಲಾ ವಿಡಿಯೋ ಚಿತ್ರಗಳನ್ನು ರಿಟ್ರೈವ್ ಮಾಡಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ಇಂದು ಆರೋಪಿ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದು ವಿಚಾರಣೆ ಸಾಧ್ಯತೆಯಿದ್ದು, ವಿದ್ಯಾರ್ಥಿನಿಯರ ಚಲನವಲನ ಗಮನಿಸಲು ಕಾಲೇಜಿನ ಸಿಸಿ ಟಿವಿ ದೃಶ್ಯಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಎಫ್‌ಐಆರ್ ನಲ್ಲೇನಿದೆ:
ದಿನಾಂಕ:20-07-2023ರAದು ಮಧ್ಯಾಹ್ನ 12.30ಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಂತು. ಅಲ್ಲಿಗೆ ತೆರಳಿ ವಿಚಾರಿಸಿದಾಗ. 18-07-2023ರಂದು ಮಧ್ಯಾಹ್ನ 2.30ರಿಂದ 3 ಗಂಟೆ ಸಮಯದಲ್ಲಿ 2ನೇ ವರ್ಷದ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಿದ್ದರಂತೆ. ಆಗ ಅವಳ ಮೂವರು ಗೆಳೆತಿಯರು ವಿಡಿಯೋ ಮಾಡಲು ಹೋಗಿದ್ದಾರೆ. ಆದರೆ ಆಕಸ್ಮಿಕವಾಗಿ ಬೇರೊಬ್ಬರ ವಿಡಿಯೋ ಮಾಡಿದ್ದಾರೆ. ಇದು ಆ ವಿದ್ಯಾರ್ಥಿನಿಯ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರ ಸಮಕ್ಷಮದಲ್ಲೇ ವಿಡಿಯೋ ಡಿಲೀಟ್ ಮಾಡಿ, ಕ್ಷಮೆಯಾಚಿಸಿರುತ್ತಾರೆ. 19-07-2023ರಂದು ಆಡಳಿತ ಮಂಡಳಿಯವರು ಮೂವರು ವಿದ್ಯಾರ್ಥಿನಿಯ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. 25-07-2023ರಂದು ಆಡಳಿತ ಮಂಡಳಿಯವರು ನಡೆಸಿದ ಸುದ್ದಿಗೋಷ್ಠಿಯಲ್ಲೇ ತಾವೇ ವಿಡಿಯೋ ಮಾಡಿದ್ದೇವೆ ಎಂದು ಮೂವರು ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ನೀಡಿರುತ್ತಾರೆ. ಅವರನ್ನ ಆಡಳಿತ ಮಂಡಳಿ ಅಮಾನತು ಮಾಡಿರುತ್ತದೆ ಎಂದು ಎಫ್‌ಆರ್‌ಐನಲ್ಲಿದೆ.
ಒಟ್ಟಿನಲ್ಲಿ ಉಡುಪಿಯ ಕಾಲೇಜು ಗರ್ಲ್ಸ್ ಟಾಯ್ಲೆಟ್‌ನಲ್ಲಿ ಚಿತ್ರೀಕರಣ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ರಾಜಕೀಯ ತಿರುವನ್ನೂ ಪಡೆದಿದೆ. ಆದರೆ ತನಿಖೆಯಿಂದ ಮಾತ್ರವೇ ಪ್ರಕರಣದ ಅಸಲಿಯತ್ತು ಗೊತ್ತಾಗಬೇಕಿದೆ.