ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾಲಯದ ಗೌರವ ಸ್ವೀಕರಿಸಿ, ಮಾತನಾಡಿದ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಹೆಬ್ರಿ ಕಾರ್ಗಿಲ್ ಜಿಲ್ಲೆಯನ್ನು ನಮ್ಮ ದೇಶದ ಯೋಧರು ಪಾಕಿಸ್ಥಾನದ ಯೋಧರೊಂದಿಗೆ ಹೋರಾಡಿ ಗೆಲ್ಲುವ ಮೂಲಕ ಮರಳಿ ಪಡೆದ ಭೂಭಾಗವಾಗಿದೆ. ಅಲ್ಲದೆ ನೂರಾರು ಸಹೋದ್ಯೋಗಿಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶ ಸೇವೆಗೆ ಅಣಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಮಾತನಾಡಿ, ಭಾರತೀಯ ಸೇನೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದೆ. ಯೋಧರು ತಮ್ಮ ಕುಟುಂಬವನ್ನು ಬಿಟ್ಟು ದೇಶವನ್ನು ಕುಟುಂಬದAತೆ ಪ್ರೀತಿಸುವವರು , ಹಾಗಾಗಿ ವಿದ್ಯಾರ್ಥಿಗಳು ದೇಶ ಸೇವೆಯ ಭಾಗವಾಗಬೇಕಾಗಿದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಮುಖ್ಯಸ್ಥೆ ಅಪರ್ಣಾ ಆಚಾರ್, ಗುರೂಜಿ ಮಾತಾಜಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಶಿಕ್ಷಕಿ ಅನಿತಾ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕಿ ಮೀನಾಕ್ಷಿ ವಂದಿಸಿದರು., ಪ್ರಾಥಮಿಕ ವಿಭಾಗದ ಶಿಕ್ಷಕಿ ರೇಖಾ ನಿರೂಪಿಸಿದರು.