ಇಂಫಾಲ್ : ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಹಿಂಸೆ ಮುಂದುವರಿದಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಯೋಧ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ರಾಜ್ಯ ರಾಜಧಾನಿ ಇಂಫಾಲ್ನಿAದ 50 ಕಿಮೀ ದೂರದಲ್ಲಿರುವ ಫೌಬಕ್ಚಾವೊ ಇಖೈ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು. ಬಳಿಕ ಸುಮಾರು 15 ತಾಸು ಕಾಲ ತಡರಾತ್ರಿವರೆಗೆ ಚಕಮಕಿ ನಡೆದಿದ್ದು, ಕೊನೆಗೆ ಉಗ್ರರು ಪರಾರಿಯಾಗಿದ್ದಾರೆ.
ಈ ನಡುವೆ, ಗುಂಡಿನ ಚಕಮಕಿ ಸಂದರ್ಭದಲ್ಲಿ, ಈ ಸ್ಥಳದ ಸಮೀಪದ ತೇರಾ ಖೊಂಗ್ಸಾAಗ್ಬಿ ಎಂಬಲ್ಲಿ 1 ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಪ್ರದೇಶದ ಮೇಲೆ ಹಾರಾಡಿದ ಡ್ರೊನ್, ಉಗ್ರರು ತಮ್ಮ ಕೆಲವು ಸಹಚರರನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದೆ. ಆದರೆ ಆ ದಂಗೆಕೋರರು ಗಾಯಗೊಂಡಿದ್ದಾರೆಯೇ ಅಥವಾ ಕೊಲ್ಲಲ್ಪಟ್ಟಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಆರಂಭವಾದ ಜನಾಂಗೀಯ ಹಿಂಸಾಚಾರವು, ಈವರೆಗೆ 160 ಜನರನ್ನು ಬಲಿಪಡೆದಿದೆ