ಬೆಂಗಳೂರು: ನಗರದಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಮನೆಯಲ್ಲಿ ಸಿಕ್ಕ ಗ್ರೆನೇಡ್ ವಿದೇಶದಿಂದ ಆಮದಾಗಿರುವ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ಗ್ರೆನೇಡ್ ಬಗ್ಗೆ ಬಿಡಿಟಿಎಸ್, ಎಫ್‌ಎಸ್‌ಎಲ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಬಂಧಿತ ಐವರು ಶಂಕಿತರು ಕೇವಲ ಕೊರಿಯರ್ ಮೂಲಕ ಬಂದ ಗ್ರೆನೇಡ್, ಪಿಸ್ತೂಲ್ ಇದ್ದ ಪಾರ್ಸೆಲ್‌ಗಳನ್ನು ತೆಗೆದುಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಆದರೆ ಕೃತ್ಯದ ಯೋಜನೆ, ಸಂಚನ್ನು ಬೇರೆ ತಂಡ ರೂಪಿಸುತ್ತಿದ್ದ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
ಈ ಗ್ರೆನೇಡ್, ಪಿಸ್ತೂಲ್ ಬಗ್ಗೆ ಯಾರಿಗೂ ಹೇಳದಂತೆ ಶಂಕಿತರ ಬಳಿ ಆರೋಪಿಗಳಾದ ನಜೀರ್, ಜುನೈದ್ ಪ್ರಮಾಣ ಮಾಡಿಸಿಕೊಂಡಿದ್ದರAತೆ. ಡೆಲಿವರಿ ಬಾಯ್ ನೀಡುವ ಪಾರ್ಸೆಲ್ ಓಪನ್ ಮಾಡಬಾರದು. ಏನೇ ಕೆಲಸ ಮಾಡಿದರೂ ಯಾರಿಗೂ ಹೇಳದಂತೆ ಶಂಕಿತರು ಪ್ರಮಾಣಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೆ, ಡ್ರಗ್ಸ್ ಕೂಡ ಸಪ್ಲೈ ಮಾಡುತ್ತಿದ್ದರು ಎಂಬ ಅಂಶ ಸಿಸಿಬಿ ತನಿಖೆ ವೇಳೆ ಬಯಲಾಗಿದೆ. ಬಂಧಿತರ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಇಬ್ಬರು ಶಂಕಿತ ಉಗ್ರರರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.
ಶಂಕಿತ ಉಗ್ರ ಮುದಾಸಿರ್ ಪ್ರಿಯತಮೆ ಕೈಯಲ್ಲಿ ಡ್ರಗ್ಸ್ ಇಟ್ಟು ನಾನು ಹೇಳಿದವರಿಗೆ ಇದನ್ನು ಕೊಡು ಎಂದು ಹೇಳಿ ಹೋಗುತ್ತಿದ್ದನಂತೆ. ಇದರಂತೆ ಪ್ರಿಯತಮ ಹೇಳಿದವರಿಗೆ ಕೊಡುತ್ತಿದ್ದಳು. ಮುದಾಸಿರ್ ತಾನು ಬಂಧನವಾದ ದಿನವೂ ಗೆಳತಿಗೆ ಡ್ರಗ್ಸ್ ಕೊಟ್ಟು ಸಪ್ಲೈ ಮಾಡು ಎಂದಿದ್ದನAತೆ.