ಕಾರ್ಕಳ: ನೂತನ ಮನೆ ನಿರ್ಮಾಣದ ಒಳಾಂಗಣ ವಿನ್ಯಾಸದ ಕಾಮಗಾರಿ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಅಮರನಾಥ ವಾಂಗೇಯ ರಾಮ್ ವಿಶ್ವಕರ್ಮ {57) ಎಂಬವರು ತಾನು ವಾಸವಿದ್ದ ಮನೆಯ ಶೌಚಾಲಯದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪರಪು ಬಸ್ ನಿಲ್ದಾಣದ ಬಳಿ ಪ್ರಕಾಶ್ ನಾಯಕ್ ಎಂಬವರ ಮನೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು ಮನೆಯ ಒಳಾಂಗಣದ ವಿನ್ಯಾಸದ ಕಾಮಗಾರಿಯನ್ನು ಉತ್ತರಪ್ರದೇಶ ಮೂಲದ ಸಂತೋಷ್ ಚೌರಾಸಿಯಾ ಎಂಬವರಿಗೆ ಗುತ್ತಿಗೆ ನೀಡಲಾಗಿತ್ತು.
ಕಳೆದ 5 ತಿಂಗಳಿನಿAದ ಇಂಟೀರಿಯರ್ ಕಾಮಗಾರಿ ನಡೆಯುತ್ತಿದ್ದು ಕಳೆದ 3 ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಮೂಲದ ಅಮರನಾಥ್ ವಾಂಗೇಯ ರಾಮ್ ವಿಶ್ವಕರ್ಮ ಎಂಬವರು ಕೆಲಸಕ್ಕೆ ಸೇರಿಕೊಂಡಿದ್ದು ಸೋಮವಾರ ಬೆಳಗ್ಗೆ 7 ಗಂಟೆಗೆ ಶೌಚಾಲಯಕ್ಕೆ ಹೋದವರು ಕುಸಿದುಬಿದ್ದು ತೀವೃವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಟಿ.ಎಂ,ಎ ಪೈ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ