Share this news

ಮೂಲ್ಕಿ : ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ನ ಮುಂದಿನ ಎರಡುವರೆ ವರ್ಷಗಳ ಅವಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದ್ದು ಎರಡು ಪಕ್ಷದ ಬೆಂಬಲಿಗರು ಪಂಚಾಯಿತಿನ ಹೊರಗಡೆ ಜಮಾಯಿಸಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ವಾರ್ಡ್ ಗಳಿದ್ದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು 11 ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು 11 ಮಂದಿ ಆಯ್ಕೆಯಾಗಿದ್ದರು.

ಮೊದಲ ಅವಧಿಯಲ್ಲಿ ಎರಡು ಪಕ್ಷಗಳ ಬೆಂಬಲಿತರ ಸಮಬಲದಿಂದ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ಸದಸ್ಯರಿಗೆ ಅಧಿಕಾರ ಪಟ್ಟ ಒಲಿದು ಬಂದಿತ್ತು.
ಬಿಜೆಪಿ ಬೆಂಬಲಿತರ ಎರಡೂವರೆ ವರ್ಷಗಳ ಅಧಿಕಾರದ ಬಳಿಕ ಈ ಬಾರಿ ಬದಲಾದ ವಿದ್ಯಮಾನಗಳಲ್ಲಿ ಬಿಜೆಪಿ ಬೆಂಬಲಿತ ಓರ್ವ ಸದಸ್ಯೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಜೊತೆ ಗುರುತಿಸಿಕೊಂಡಿದ್ದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯನೊಬ್ಬರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಬದಲಾದ ವಿದ್ಯಾಮಾನದಲ್ಲಿಯೂ ಸಮಬಲವಾಗಿದ್ದು ಮಾತ್ರವಲ್ಲದೆ, ಕಾಂಗ್ರೇಸ್ ಬೆಂಬಲಿತ ಮಹಿಳಾ ಸದಸ್ಯರೊಬ್ಬರು ಭ್ರಷ್ಟಾಚಾರ ಆರೋಪದ ಕಾರಣ ಅವರ ಸದಸ್ಯತನ ರದ್ದಾಗಿತ್ತು, ಕೋರ್ಟ್ ತೀರ್ಪಿನ ಪ್ರಕಾರ ಆ ಮಹಿಳೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂಬುದು ಬಿಜೆಪಿ ಕಾರ್ಯಕರ್ತರ ವಾದವಾದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂಬುದು ಕಾಂಗ್ರೇಸ್ ಕಾರ್ಯಕರ್ತರ ವಾದವಾಗಿತ್ತು. ಈ ಕಾರಣದಿಂದ ಚುನಾವಣೆ ನಡೆಯದೆ ಸ್ಥಳದಲ್ಲಿ ಕಾಂಗ್ರೇಸ್ ಬಿ.ಜೆ.ಪಿ ಸದಸ್ಯರು ಜಮಾಯಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮದ್ಯಾಹ್ನ 12 ಗಂಟೆಗೆ ಚುನಾವಣಾ ಪ್ರಕ್ರಿಯೆ ನಡೆದು 1.00 ಗಂಟೆಗೆ ಫಲಿತಾಂಶ ಬರಬೇಕಾಗಿದ್ದರೂ, ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿಲ್ಲ, ನಂತರ ಚುನಾವಣಾ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಂಗ್ರೇಸ್ ಬೆಂಬಲಿತ ಮಹಿಳಾ ಸದಸ್ಯರನ್ನು ಹೊರಗಿಟ್ಟು, ಚುನಾವಣಾ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭ ಬಿಜೆಪಿ ಬೆಂಬಲಿತರು ಪೂರ್ಣಿಮಾ ಅಧ್ಯಕ್ಷರಾಗಿ ಮತ್ತು ಚಂದ್ರಿಕಾ ಕೋಟ್ಯಾನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.


ಬಿಜೆಪಿ ಬೆಂಬಲಿತರು ಆಯ್ಕೆಯಾದ ಬಳಿಕ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆ ಕಾಂಗ್ರೇಸ್ ಬೆಂಬಲಿತರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.
ಈ ಮಧ್ಯೆ ಪರಿಸ್ಥಿತಿ ಬಿಗಾಡಾಯಿಸುವ ಲಕ್ಷಣ ಗೋಚರಿಸುತ್ತಿದಂತೆ ಪೋಲೀಸರು ಬಿಗಿ ಬಂದೋಬಸ್ತ್ ನಡೆಸಿ ಪರೀಸ್ಥಿಯನ್ನು ಹತೋಟಿಗೆ ತಂದರು.

Leave a Reply

Your email address will not be published. Required fields are marked *