ಬೆಂಗಳೂರು: ದೇಶದ 76ನೇ ಸ್ವಾತಂತ್ರ‍್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆ ನಾನಾ ರಾಜ್ಯಗಳ ಪೊಲೀಸ್ ಅಧಿಕಾರಿಗಳನ್ನು ಪದಕ ಪುರಸ್ಕಾರದಿಂದ ಗೌರವಿಸಿದೆ. ಕೇಂದ್ರ ಗೃಹ ಇಲಾಖೆ ಇಂದು (ಶನಿವಾರ) ಈ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿ ಕರ್ನಾಟಕದ ಐದು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಮಂತ್ರಿ ಪದಕ ಲಭಿಸಿದೆ. ತನಿಖೆಯಲ್ಲಿ ಉತ್ಕೃಷ್ಟ ಸಾಧನೆಗಾಗಿ ಈ ಅಧಿಕಾರಿಗಳಿಗೆ ಪ್ರಶಸ್ತಿ ಸಂದಾಯವಾಗಿದೆ.

ರಾಜ್ಯದ ಹಿರಿಯ ಅಧಿಕಾರಿಗಳಾದ ಶಂಕರ್ ಎಂ ರಾಗಿ-ಡಿಎಸ್‌ಪಿ, ರಾಮಪ್ಪ ಬಿ ಗುತ್ತೇದಾರ್, ತಾವರೆಕೆರೆ ಪೊಲೀಸ್ ಠಾಣೆ -ರಾಮನಗರ, ಸಿಬಿ ಶಿವಸ್ವಾಮಿ -ಪೊಲೀಸ್ ಇನ್ಸ್ಪೆಕ್ಟರ್- ಹೈಗ್ರೌಂಡ್ಸ್ ಪೊಲೀಸ್ ಠಾಣೆ -ಬೆಂಗಳೂರು, ರುದ್ರೇಗೌಡ ಆರ್ ಪಾಟೀಲ್ -ಪೊಲೀಸ್ ಇನ್ಸ್ಪೆಕ್ಟರ್ -ವಿನೋಬ್ ನಗರ-ಶಿವಮೊಗ್ಗ ಮತ್ತು ಪಿ ಸುರೇಶ್, ಪೊಲೀಸ್ ಇನ್ಸ್ಪೆಕ್ಟರ್ ಆರ್‌ಎಂಸಿ ಯಾರ್ಡ್-ಬೆಂಗಳೂರು ಇವರುಗಳಿಗೆ ಕೇಂದ್ರ ಗೃಹ ಸಚಿವಾಲಯದಪದಕ ಲಭ್ಯವಾಗಿದೆ.

