ಮುಲ್ಕಿ: ಕೇಸರಿ ಫ್ರೆಂಡ್ಸ್ ಸುರತ್ಕಲ್ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶ್ರೀ ರಾಮಾಂಜನೇಯ ಸೇವಾ ಮಂದಿರದ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಪದ್ಮನಾಭ ಪೂಜಾರಿ ಅವರು ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸತೀಶ್ ಶೆಟ್ಟಿ, ರಕ್ಷಿತ್ ಬಂಗೇರ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

