ಮೂಡಬಿದಿರೆ: ಮೂಡುಬಿದಿರೆ ನೇತಾಜಿ ಬ್ರಿಗೇಡ್ ವತಿಯಿಂದ 121,122,123,126ನೇ ವಾರದ ಶ್ರಮದಾನವು “ಹಿರಿಯ ಪ್ರಾಥಮಿಕ ಶಾಲೆ,ಮೂಡುಬಿದಿರೆ 3rd, ಲೇಬರ್ ಶಾಲೆಯಲ್ಲಿ” ನಡೆಯಿತು.
ಶಾಲೆಯ ಆವರಣ ಗೋಡೆ ಬೀಳುವ ಸ್ಥಿತಿಯಲ್ಲಿದ್ದು ಇದನ್ನು ಮನಗಂಡ ನೇತಾಜಿ ಬ್ರಿಗೇಡ್ ಸಂಘಟನೆ ಅದನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.
ಆವರಣ ಗೋಡೆ ದುರಸ್ತಿಗೆ 100 ಕಲ್ಲಿನ ವ್ಯವಸ್ಥೆಯನ್ನು ದಾನಿ ಸಂದೀಪ್ ರವರು ನೀಡಿ ಸಹಕರಿಸಿದರು. ಒಟ್ಟು 13,000 ರೂ. ವೆಚ್ಚದಲ್ಲಿ ಆವರಣಗೋಡೆ ದುರಸ್ತಿಗೊಳಿಸಲಾಯಿತು.
ಶ್ರಮದಾನದಲ್ಲಿ ಬ್ರಿಗೇಡ್ ನ ಸಂಚಾಲಕರು, ಪದಾಧಿಕಾರಿಗಳು, ಹಾಗೂ ಸದಸ್ಯರು ಭಾಗಿಯಾಗಿದ್ದರು.

