ಬೆಂಗಳೂರು: ಕೆಂಪು ಸುಂದರಿ ಕಿಚನ್ ಕ್ವೀನ್ ಟೊಮ್ಯಾಟೋಗೆ ಇರುವ ಬೆಲೆ ಪೂರ್ತಿಯಾಗಿ ಇಳಿದಿಲ್ಲ. ಆಗಲೇ ಮತ್ತೆರಡು ತರಕಾರಿಗಳು ಜನರ ಜೇಬಿಗೆ ಕತ್ತರಿ ಹಾಕೋಕೆ ರೆಡಿ ಆಗಿವೆ. ದುಬಾರಿ ದುನಿಯಾದ ಬಿರುಗಾಳಿಗೆ ಜನರು ಮತ್ತೊಮ್ಮೆ ಸಿಲುಕುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಮಳೆಯ ಪರಿಣಾಮದಿಂದಾಗಿ ಕಳೆದ ಮೂರು ತಿಂಗಳಿನಿAದ ಗಗನಕ್ಕೇರಿದ್ದ ಕೆಂಪು ಸುಂದರಿಯ ಬೆಲೆ ದಿನ ದಿನಕ್ಕೂ ಇಳಿಕೆಯಾಗುತ್ತಿದ್ದು, ಜನರು ಕೊಂಚ ನಿಟ್ಟುಸಿರು ಬಿಡುತ್ತಿದ್ದಾರೆ. ಹೀಗಿರುವಾಗ ಮಾರ್ಕೆಟ್ನಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ದುಬಾರಿಯಾಗಲು ಆರಂಭಿಸಿದೆ. ಬೆಂಗಳೂರಿನ ಕೆ.ಆರ್ ಮಾರ್ಕೆಟ್ನಲ್ಲಿ ವಾರದ ಹಿಂದೆ 25 ರೂ. ಇದ್ದ ಕೆಜಿ ಈರುಳ್ಳಿ, ಈಗ 30 ರಿಂದ 40 ರೂ. ಆಗಿದೆ. ಇನ್ನು 80 ರಿಂದ 100 ರೂಪಾಯಿ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದ್ದು, ಶ್ರಾವಣ ಮಾಸದ ಆರಂಭದಲ್ಲಿ ಗ್ರಾಹಕರನ್ನ ಕಂಗಾಲಾಗಿಸಿದೆ. ಬೆಲೆ ಏರಿಕೆಗೆ ಬೇಸರ ವ್ಯಕ್ತಪಡಿಸಿದ ಮಹಿಳೆಯರು, ತರಕಾರಿ ಬೆಲೆಗಳು ಕಡಿಮೆ ಇದ್ದರೆ ಜನರಿಗೆ ಅನುಕೂಲ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.
ಇನ್ನು ಮುಂಗಾರು ಕೈಕೊಟ್ಟ ಕಾರಣದಿಂದಾಗಿ ಚಿತ್ರದುರ್ಗ, ದಾವಣಗೆರೆ ಸೇರಿ ಇತರೆ ಕಡೆಯಿಂದ ಈರುಳ್ಳಿ ಲಭ್ಯವಾಗುತ್ತಿಲ್ಲ. ಸದ್ಯ ರಾಜ್ಯದಲ್ಲಿ ಸುಮಾರು 4,000 ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆ ಕೊರತೆ ಇದೆ. ಮಳೆ ವಿಳಂಬ ಆಗಿರುವುದರಿಂದದ್ರಿAದ ಈರುಳ್ಳಿ ಕೊಯ್ಲು 6 ರಿಂದ 8 ವಾರಗಳ ಕಾಲ ವಿಳಂಬ ಆಗ್ತಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿಯೂ ಇದೇ ಸಮಸ್ಯೆ ಇದೆ. ಹೀಗಾಗಿ ಈರುಳ್ಳಿ ಕೊರತೆಯಿದ್ದು, ಬೇಡಿಕೆಯಷ್ಟು ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ದುಬಾರಿ ದುನಿಯಾದ ಸಂಕೋಲೆಯಲ್ಲಿ ಸಿಲುಕಿರುವ ರಾಜ್ಯದ ಜನತೆಗೆ ದರ ಹೊರೆ, ಬರೆ ಎಳೆಯುತ್ತಿರುವುದಂತೂ ಸುಳ್ಳಲ್ಲ




