ಕಾರ್ಕಳ : ತಾಲೂಕಿನ ಸಾಣೂರು ಕರಿಯಕಲ್ಲು ಇಂದಿರಾನಗರ ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ನಾಗದೇವರ ಪಂಚಮ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಹಾಗೂ ನಾಗ ಸಂದರ್ಶನ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಸಾಮೂಹಿಕ ಆಶ್ಲೇಷಾ ಬಲಿ, ಪವಮಾನ ಸೂಕ್ತ ಹೋಮ, 10:30 ರಿಂದ ಮಹಾಪೂಜೆ, 11:05 ರಿಂದ ನಾಗ ದರ್ಶನ, 12 ರಿಂದ ಪ್ರಸಾದ ವಿತರಣೆ ಹಾಗೂ 1 ಗಂಟೆಯಿಂದ ಸಾರ್ವಜನಿಕ ಅನ್ನಸಂಪರ್ಪಣೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯ ಪ್ರಕಟಣೆ ತಿಳಿಸಿದೆ.





