Share this news

ಕಾರ್ಕಳ: ಸ್ವಾತಂತ್ರ‍್ಯ ನಮಗೆ ಸುಲಭವಾಗಿ ಬಂದಿಲ್ಲ. ಸಾವಿರಾರು ಮಂದಿಯ ಸತತ ಪ್ರಯತ್ನ, ಪರಿಶ್ರಮ, ಹೋರಾಟ, ಬಲಿದಾನದಿಂದ ದೊರೆತಿದೆ. ಸ್ವಾತಂತ್ರ‍್ಯ ಹೋರಾಟಗಾರನ್ನು ಸ್ಮರಿಸುವುದು ಭಾರತದ ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ವೆಂಕಟರಮಣ ದೇವಳದ ಒಂದನೇ ಆಡಳಿತ ಮೊಕ್ತೇಸರರಾದ ಶ್ರೀ ಕೆ ಜಯರಾಮ ಪ್ರಭು ಹೇಳಿದರು.

ಅವರು ಎಸ್.ವಿ.ಟಿ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ನಡೆದ 77ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಸಾಣೂರು ಎನ್ ಗಣೇಶ್ ಕಾಮತ್, ಕಾರ್ಯದರ್ಶಿ ಕೆ ಪಿ ಶೆಣೈ, ದೇವಳದ ವಿಶ್ವಸ್ಥ ಮಂಡಳಿಯ ಶಂಕರ್ ಕಾಮತ್, ಶಾಲಾ ಹಿತೈಷಿ ಶ್ರೀಮತಿ ಭಾರತಿ ಕಿಣಿ, ಎಲ್ಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *