ಉಡುಪಿ : ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ವ್ಯಕ್ತಿಗತ ಸ್ಪರ್ಧೆ, ಹುಲಿ ವೇಷ ಕುಣಿತ, ಜಾನಪದ ಸ್ಪರ್ಧೆ ಮೂರು ವಿಭಾಗವಾಗಿ ಪ್ರಥಮ ದ್ವಿತೀಯ ತೃತೀಯ ಮೂರು ವಿಭಾಗದಲ್ಲಿ ಬಹುಮಾನಗಳಿವೆ.
ಆಗಸ್ಟ್ 27ರ ಬೆಳಿಗ್ಗೆ 8.30 ಕ್ಕೆ ಕನಕ ಮಂಟಪದಲ್ಲಿ ರಸಪ್ರಶ್ನೆ, ಅನ್ನಬ್ರಹ್ಮ ಸಭಾಂಗಣದಲ್ಲಿ ಬೆಳಿಗ್ಗೆ ಸಾಂಪ್ರದಾಯಿಕ ಚುಕ್ಕಿ ರಂಗೋಲಿ, ಸೆಪ್ಟೆಂಬರ್ 2ರ ಮಧ್ಯಾಹ್ನ 2:30 ರಿಂದ ಅನ್ನಬ್ರಹ್ಮ ಮದ್ವಮಂಟಪ ರಾಜಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆ ನಡೆಯಲಿದೆ.
ಸೆಪ್ಟೆಂಬರ್ 2ರ ಮಧ್ಯಾಹ್ನ 2:30ಕ್ಕೆ ಮದ್ವಮಂಟಪದಲ್ಲಿ ಶಂಖ ಊದುವ ಸ್ಪರ್ಧೆ, ಸೆಪ್ಟೆಂಬರ್ 3ಕ್ಕೆ ಬೆಳಿಗ್ಗೆ 10.30 ರಿಂದ ಮಧ್ವಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರ ಸ್ಪರ್ಧೆ, ಸೆಪ್ಟೆಂಬರ್ 6ಕ್ಕೆ ಬೆಳಿಗ್ಗೆ 9:30 ರಿಂದ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿದ್ದು ಮಧ್ವಾಂಗಣದಲ್ಲಿ ಮುದ್ದುಕೃಷ್ಣ, ಭೋಜನಶಾಲೆ ಮಾಳಿಗೆಯಲ್ಲಿ ಬಾಲಕೃಷ್ಣ, ಅನ್ನಬ್ರಹ್ಮದಲ್ಲಿ ಕಿಶೋರ ಕೃಷ್ಣ ಸ್ಪರ್ಧೆ ಹಾಗೂ ಸೆಪ್ಟೆಂಬರ್ 7ರಂದು ರಾತ್ರಿ 7:30 ರಿಂದ ಜಾನಪದ ಹುಲಿವೇಷ ಕುಣಿತ ಸ್ಪರ್ಧೆ ನಡೆಯಲಿದೆ.
ಕೃಷ್ಣಮಠದ ಬಡಗು ಮಾಳಿಗೆ ಕಚೇರಿಯಲ್ಲಿ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 6 ಗಂಟೆಯ ಒಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 0820-2520598 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ







