Share this news

ಕಾರ್ಕಳ ತಾಲೂಕಿನ ದುರ್ಗಾ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ದೇವಕಿ, ಉಪಾಧ್ಯಕ್ಷರಾಗಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದುರ್ಗಾ ಪಂಚಾಯತ್ ನಲ್ಲಿ 9 ಮಂದಿ ಸದಸ್ಯರಿದ್ದು ಎಲ್ಲರೂ ಬಿಜೆಪಿ ಬೆಂಬಲಿತರು. ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಕೆಟಗರಿಗೆ ನಿಗದಿಯಾಗಿತ್ತು. ಚುನಾವಣಾ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ ಕರ್ತವ್ಯ ನಿರ್ವಹಿಸಿದರು.

ತಾಲೂಕಿನ ಕಾಂತಾವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ರಾಜೇಶ್ ಕೋಟ್ಯಾನ್ ಹಾಗೂ ಉಪಾಧ್ಯಕ್ಷರಾಗಿ ಪ್ರಭಾಕರ್ ಮಲ್ಯ ಆಯ್ಕೆಯಾಗಿದ್ದಾರೆ. ಕಾಂತಾವರ ಗ್ರಾಮ ಪಂಚಾಯತ್ ನಲ್ಲಿ 9 ಮಂದಿ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ನಿಗದಿಯಾಗಿದ್ದು ಬಿಜೆಪಿ ಬೆಂಬಲಿತ ರಾಜೇಶ್ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಕೆಟಗರಿ ನಿಗದಿಯಾಗಿದ್ದು ಬಿಜೆಪಿಯಿಂದ ಪ್ರಭಾಕರ್ ಮೌಲ್ಯ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುರೇಖಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸುರೇಖಾ 4 ಮತ ಪಡೆದರೆ ಪ್ರಭಾಕರ ಮೌಲ್ಯ 5 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕಾರ್ಕಳ ತಾಲೂಕು ಪಂಚಾಯತ್ ಅಕ್ಷರ ದಾಸೋಹ ಸಹಾಯಹ ನಿರ್ದೇಶಕರಾದ ಟಿ.ಭಾಸ್ಕರ್ ಕರ್ತವ್ಯ ನಿರ್ವಹಿಸಿದ್ದರು.

ತಾಲೂಕಿನ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ತಾರಾ ಆಯ್ಕೆಯಾಗಿದ್ದಾರೆ. ನಲ್ಲೂರು ಪಂಚಾಯತ್ ನಲ್ಲಿ 15ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಅವರಲ್ಲಿ ಓರ್ವ ಸದಸ್ಯ ಮಾತ್ರ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದು ಅವರು ಕಳೆದ ಎರಡು ವಾರಗಳ ಹಿಂದೆ ರಾಜೀನಾಮೆ ನೀಡಿದ್ದು ಪ್ರಸ್ತುತ 14 ಮಂದಿ ಸದಸ್ಯರಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸುಮಿತ್ ನಲ್ಲೂರು ಬಿಜೆಪಿಯಿಂದ ಹಾಗೂ ಅಶೋಕ್ ಪೂಜಾರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರ ನಡುವೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಿತ್ ನಲ್ಲೂರು 6 ಮತಗಳನ್ನು ಪಡೆದರೆ ಅಶೋಕ್ ಪೂಜಾರಿ 7 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದ ಏಕೈಕ ಸದಸ್ಯೆ ತಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಗಳಾಗಿ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಅನಂತನಾರಾಯಣ ಭಟ್ಕಳ್ ಕಾರ್ಯನಿರ್ವಹಿಸಿದ್ದರು.

ಕೆರ್ವಾಶೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುನಿತಾ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸುನಿಲ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 8 ಮಂದಿ ಸದಸ್ಯರಿರುವ ಪಂಚಾಯತ್ ನಲ್ಲಿ 6 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ನಿಗದಿಯಾಗಿತ್ತು. ಚುನಾವಣಾ ಅಧಿಕಾರಿಯಾಗಿ ಕಾರ್ಕಳ ಪುರಸಭೆಯ ಕಮ್ಯುನಿಟಿ ಎಫೈರ್ಸ್ ಆಫೀಸರ್ ಈಶ್ವರ್ ನಾಯ್ಕ್ ಕರ್ತವ್ಯ ನಿರ್ವಹಿಸಿದರು.

ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಣಂಜಾರು ಸಚ್ಚಿದಾನಂದ ಪ್ರಭು ಹಾಗೂ ಉಪಾಧ್ಯಕ್ಷರಾಗಿ ವಿದ್ಯಾಶೆಟ್ಟಿ ಆಯ್ಕೆಯಾಗಿದ್ದಾರೆ. 15 ಮಂದಿ ಸದಸ್ಯರಿರುವ ನೀರೆ ಪಂಚಾಯತ್ ನಲ್ಲಿ 13 ಮಂದಿ ಸದಸ್ಯರು ಬಿಜೆಪಿ ಬೆಂಬಲಿತರು ಹಾಗೂ ಇಬ್ಬರು ಸದಸ್ಯರು ಕಾಂಗ್ರೆಸ್ ಬೆಂಬಲಿತರು. ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ನಿಗದಿಯಾಗಿದ್ದು ಸಚ್ಚಿದಾನಂದ ಪ್ರಭು ಹಾಗೂ ರಾಜೇಂದ್ರ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸಚ್ಚಿದಾನಂದ ಪ್ರಭು 9 ಮತ ಹಾಗೂ ರಾಜೇಂದ್ರ 6 ಮತ ಪಡೆದು ಹೆಚ್ಚಿನ ಸಚ್ಚಿದಾನಂದ ಪ್ರಭು ಅವರು ಮೂರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು ವಿದ್ಯಾಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇರ್ವತ್ತೂರು ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಭರತ್ ಜೈನ್, ಉಪಾಧ್ಯಕ್ಷರಾಗಿ ದೀಪಾ ಆಯ್ಕೆಯಾಗಿದ್ದಾರೆ.
ಇರ್ವತ್ತೂರು ಗ್ರಾಮ ಪಂಚಾಯಿತಿನಲ್ಲಿ ಒಟ್ಟು 7 ಮಂದಿ ಸದಸ್ಯರಿದ್ದು ಎಲ್ಲರೂ ಬಿಜೆಪಿ ಬೆಂಬಲಿತರು. ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಭರತ್ ಜೈನ್ ಮತ್ತು ಬಾಲಕೃಷ್ಣ ಎಂಬವರು ನಾಮಪತ್ರ ಸಲ್ಲಿಸಿದ್ದು ಭರತ್ ಜೈನ್ 5 ಮತ ಪಡೆದಿದ್ದರೆ ಬಾಲಕೃಷ್ಣ 2 ಮತ ಪಡೆದು ಭರತ್ ಜೈನ್ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ದೀಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವಿನೋದ, ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂದಳಿಕೆ ಗ್ರಾಮ ಪಂಚಾಯತಿನಲ್ಲಿ 12 ಮಂದಿ ಸದಸ್ಯರಿದ್ದು ಎಲ್ಲರೂ ಬಿಜೆಪಿ ಬೆಂಬಲಿತರು. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ನಿಗದಿಯಾಗಿತ್ತು. ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮಿಥುನ್ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *