ಕಾರ್ಕಳ: ಕಳೆದುಹೋಗಿದ್ದ ಎರಡು ಮೊಬೈಲ್ ಗಳನ್ನು ಕಾರ್ಕಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಅವುಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಪವಿತ್ರಾ ಹೆಗ್ಡೆ ಎಂಬವರ ಮೊಬೈಲ್ ಕಳೆದುಹೋಗಿದ್ದು ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು, ಇದಲ್ಲದೇ ಕಾರ್ಕಳ ಕಾಬೆಟ್ಟು ನಿವಾಸಿ ವಕೀಲರಾದ ನವೀನ್ ಚಂದ್ರ ಹೆಗ್ಡೆಯವರ ಮೊಬೈಲ್ ಕಳೆದುಹೋಗಿದ್ದು ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಕಳ ನಗರ ಠಾಣಾ ಪೊಲೀಸರು CEIR ತಂತ್ರಾಂಶದ ಮೂಲಕ ಮೊಬೈಲ್ ಟವರ್ ಲೊಕೇಶ್ ಪತ್ತೆಹಚ್ಚಿ ಮಾಲೀಕರಿಗೆ ಮರಳಿಸಿದ್ದಾರೆ.ಕಾರ್ಕಳ ನಗರ ಠಾಣಾ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.











