ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಇತ್ತೀಚೆಗಷ್ಟೇ ದೈವಾಧೀನರಾದ ಹಿರಿಯ ಲೇಖಕಿ ಮತ್ತು ಜಾಗೃತಿ ಮಹಿಳಾ ಸಂಘಟನೆಯ ಹಿರಿಯ ಸದಸ್ಯೆ ಶ್ರೀಮತಿ ಯಶವಂತಿ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ಭಾವಗಾನ ಕಾರ್ಯಕ್ರಮ ಎಸ್. ವಿ. ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ವೇದಿಕೆಯ ಸದಸ್ಯೆಯರಾದ ಅನುಪಮಾ ಚಿಪ್ಲೊಂಕರ್, ಗಾಯಿತ್ರಿ ವಿ ಕುಮಾರ್, ವಸುದಾ ಶೆಣೈ, ಡಾ.ಸುಮತಿ ಪಿ, ಮನೀಷಾ ಕಾಮತ್ ಮೊದಲಾದವರು ಭಾವ ಗಾಯನವನ್ನು ಮಾಡಿದರು.
ಅಧ್ಯಕ್ಷೆ ಮಿತ್ರ ಪ್ರಭಾ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ಮಾಲತಿ. ಜಿ..ಪೈ ನಿರೂಪಿಸಿ ವಂದಿಸಿದರು. ಶ್ಯಾಮಲ ಗೋಪಿನಾಥ ಮತ್ತು ಇಂದಿರಾ. ಕೆ ಉಪಸ್ಥಿತರಿದ್ದರು.



.


