ಹೆಬ್ರಿ: ಹೆಬ್ರಿ ತಾಲೂಕಿನ ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ 12 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರ ಬಣ ಕ್ಲೀನ್ ಸ್ವೀಪ್ ಮಾಡುವ ಮೂಲಕ ಬಿಜೆಪಿ ಬೆಂಬಲಿತರು ಒಂದೂ ಸ್ಥಾನ ಗೆಲ್ಲಲಾಗದೇ ಭಾರೀ ಮುಖಭಂಗ ಅನುಭವಿಸಿದ್ದಾರೆ.
ವರಂಗ ವ್ಯವಸಾಯ ಸಂಘದ ಕಳೆದ ಅವಧಿಯಲ್ಲಿ ನಾಲ್ಕು ಸ್ಥಾನಗಳನ್ನು ಪಡೆದು ಸ್ವಲ್ಪಮಟ್ಟಿನ ಹೋರಾಟ ನೀಡಿದ್ದ ಬಿಜೆಪಿ ಬೆಂಬಲಿತರು ಈ ಬಾರಿ ಸಂಪೂರ್ಣ ಸೋತು ಸುಣ್ಣವಾಗಿದ್ದಾರೆ.

ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ವರಂಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಉಷಾ ಹೆಬ್ಬಾರ್, ಸುರೇಂದ್ರ ಶೆಟ್ಟಿ ಹಾಗೂ ರತ್ನಾಕರ ಪೂಜಾರಿ ಸೋತು ಮುಖಭಂಗ ಅನುಭವಿಸಿದರೆ, ಇತ್ತ ಬಿಜೆಪಿ ಪ್ರಮುಖರಾದ ಅಕ್ಷಯ ಜೈನ್, ಸಂತೋಷ್ ಶೆಟ್ಟಿ, ಸನತ್ ಸೇರಿದಂತೆ ಎಲ್ಲಾ 12 ಅಭ್ಯರ್ಥಿಗಳೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮುಂದೆ ಸೋತು ಮಂಡಿಯೂರಿದ್ದಾರೆ.
ಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಟ್ಟಿ: ಚಂದ್ರಶೇಖರ ಬಾಯರಿ, ರವಿ ಪೂಜಾರಿ, ಲಕ್ಷ್ಮಣ ಆಚಾರ್ಯ, ಜಗದೀಶ ಹೆಗ್ಡೆ, ಇಂದಿರಾ, ಶಶಿಕಲಾ ಪೂಜಾರಿ, ಸುರೇಶ್ ನಾಯ್ಕ್, ಸುಧನ್ವ ಪಾಣರ, ಶುಭದರ ಶೆಟ್ಟಿ, ಕೃಷ್ಣಕಾಂತ ನಾಯಕ್ ಣ ಸುರೇಶ ಶೆಟ್ಟಿಗಾರ್ ಹಾಗೂ ಕೃಷ್ಣ ಆಚಾರ್ಯ
ಬಿಜೆಪಿ ಬೆಂಬಲಿತ ಎಲ್ಲಾ ಸದಸ್ಯರು ಹೀನಾಯವಾಗಿ ಸೋಲಲು ಸ್ಥಳೀಯ ಬಿಜೆಪಿ ನಾಯಕರ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಪಕ್ಷದ ಕಾರ್ಯಕರ್ತರ ನಡುವೆ ಸಮ್ವಯತೆ ಸಾಧಿಸಲು ವಿಫಲವಾದ ನಾಯಕರಿಂದ ಈ ಬಾರಿ ಕನಿಷ್ಟ ಒಂದೂ ಸ್ಥಾನ ಗೆಲ್ಲಲಾರದೇ ಇರಿಸುಮುರಿಸು ಉಂಟಾಗಿದೆ.


