Share this news

ಅಜೆಕಾರು: ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಮತ್ತೆ ಗಾಯ ಉಲ್ಬಣಗೊಂಡು ತೀವೃ ವಾಂತಿ ಹಾಗೂ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಮಾನಂದ ನಾಯ್ಕ್ ಎಂಬವರ ಮಗ ರಜನೀಶ್ (18) ಮೃತಪಟ್ಟ ಯುವಕ. ರಜನೀಶ ಕಳೆದ ಹಲವು ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡಿನ ಜಿಲ್ಲಾ ಸರಕಾರಿ ಆಸ್ವತ್ರೆಯಲ್ಲಿ 3 ವಾರದ ಹಿಂದೆ ಒಳರೋಗಿಯಾಗಿ ದಾಖಲಾಗಿದ್ದ. ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದ್ದು 3 ದಿನಗಳ ಬಳಿಕ ವಾಂತಿ ಹಾಗೂ ಜ್ವರ ಶುರುವಾಗಿತ್ತು.

ಇದಾದ ಬಳಿಕ ಮತ್ತೆ 10 ದಿನಗಳ ನಂತರ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಲು ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ವತ್ರೆಗೆ ಹೋದಾಗ ವೈದ್ಯರು ಹೊಲಿಗೆ ತೆಗೆಯಿಸಿ, ವಾಂತಿ ಹಾಗೂ ಜ್ವರಕ್ಕೆ ಔಷಧಿ ನೀಡಿದ್ದರು. ಇದಾದ ಬಳಿಕ ಭಾನುವಾರ ಬೆಳಗ್ಗೆ ಏಕಾಎಕಿ ವಾಂತಿ ಜ್ವರ ಉಲ್ಬಣಗೊಂಡ ಹಿನ್ನಲೆಯಲ್ಲಿ ರಜನೀಶ್ ನನ್ನು ತಕ್ಷಣವೇ ಕಾರ್ಕಳದ ಖಾಸಗಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ವತ್ರೆ ಅಜ್ಜರಕಾಡಿಗೆ ಕರೆದುಕೊಂಡು ಹೋಗಿದ್ದರು ಆದರೆ ಹೆಚ್ಚಿನ ಚಿಕಿತ್ಸೆಗೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ವತ್ರೆಗೆ ಸಾಗಿಸುವ ವೇಳೆಗೆ ರಜನೀಶ್ ಮೃತಪಟ್ಟಿದ್ದಾನೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *