ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಗೃಹಬಳಕೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿರುವ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ರಾಜ್ಯ ಸರ್ಕಾರವು ರಾಜ್ಯದ ಮುಂಗಡ ಹಣವನ್ನು ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 5 ಎಸ್ಕಾಂಗಳಿಗೆ ಜುಲೈ ತಿಂಗಳ ಮಾಹೆಯಲ್ಲಿ ಒಟ್ಟು 476 ಕೋಟಿ ರೂಪಾಯಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಬೆಸ್ಕಾಂಗೆ 235.07 ಕೋಟಿ ರೂ.,ಮೆಸ್ಕಾಂಗೆ 52.73 ಕೋಟಿ ರೂ., ಹೆಸ್ಕಾಂಗೆ 83.48 ಕೋಟಿ ರೂ.,ಜೆಸ್ಕಾಂಗೆ 53.46 ಕೋಟಿ ರೂ.,ಚೆಸ್ಕಾಂಗೆ 51.26 ಕೋಟಿ ರೂ, ಒಟ್ಟು 476 ಕೋಟಿ ರೂಪಾಯಿ ಮುಂಗಡ ಸಹಾಯಧನ ಬಿಡುಗಡೆ ಮಾಡಲಾಗಿದೆ.









