ಮುಲ್ಕಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಮದರ್ ತೆರೇಸಾ ಲೇಔಟ್ ನಲ್ಲಿ ಶೀಲತಾ ಪೂಜಾರಿ ಎಂಬವರ ಮನೆಯಿಂದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ನಗ -ನಗದನ್ನು ಕಳವುಗೈದಿದ್ದಾರೆ.
ಶೀಲತಾ ಮನೆಯವರು ಶನಿವಾರ ಮನೆಗೆ ಬೀಗ ಹಾಕಿ ತವರು ಮನೆಗೆ ಹೋಗಿದ್ದವರು ಮಂಗಳವಾರ ಬಂದು ನೋಡಿದಾಗ ಮನೆಯಲ್ಲಿ ಕಳ್ಳತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಹಿಂಬದಿಯ ಅಡಿಗೆ ಕೋಣೆಯ ಕಬ್ಬಿಣದ ಗ್ರಿಲ್ಸ್ ಅನ್ನು ಮೆಷಿನ್ ನಲ್ಲಿ ತುಂಡರಿಸಿ ಮನೆಗೆ ನುಗ್ಗಿ ಸುಮಾರು 5 ಲಕ್ಷ ರೂ. ಮೊತ್ತದ ನಗ ನಗದನ್ನು ಕಳವುಗೈದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು,ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.