Share this news

ಕಾರ್ಕಳ: ಗ್ರಾಮ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದ್ದ ಭಿನ್ನಮತ ಇದೀದ ಮತ್ತೆ ಭುಗಿಲೆದ್ದಿದ್ದು, ನೀರೆ ಗ್ರಾಮ ಪಂಚಾಯತಿಯ ನುನಾವಣೆಯಲ್ಲಿನ ಬಂಡಾಯ ಅಭ್ಯರ್ಥಿ ಸ್ಪರ್ಧೆಯ ವಿಚಾರದಲ್ಲಿ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಹುದೆಗಳಲ್ಲಿನ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ

ನೀರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಾಜೇಂದ್ರ ಶೆಟ್ಟಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಂಡಾಯ ಅಭ್ಯರ್ಥಿಯ ವಿರುದ್ಧ ಸೋತಿದ್ದರು, ಇದರಿಂದ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿ ರಾಜೇಂದ್ರ ಶೆಟ್ಟಿ ಪಕ್ಷ ವಿರೋಧಿಗಳನ್ನು ಪಕ್ಷದಿಂದ ಹೊರಹಾಕಬೇಕೆಂದು ಬಿಗಿಪಟ್ಟು ಹಿಡಿದ್ದಿದ್ದರು. ಆದರೆ ರಾಜೇಂದ್ರ ಶೆಟ್ಟಿ ವಿರೋಧಿ ಪಾಳಯ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಸಿಟ್ಟಿಗೆದ್ದ ನಾಲ್ವರು ಪಂಚಾಯಿತಿ ಸದಸ್ಯರಾದ ರಾಜೇಂದ್ರ ಶೆಟ್ಟಿ, ಮಹೇಶ್ ಸಫಲಿಗ,ಲಿಲಾವತಿ ಪೂಜಾರಿ ಹಾಗೂ ಪದ್ಮ ಎಂಬವರು ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದಲ್ಲದೇ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಾದ ಸಚಿನ್ ಪೂಜಾರಿ, ಶರತ್ ಶೆಟ್ಟಿ,ಸಂದೇಶ್ ಶೆಟ್ಟಿ,,ಸಂತೋಷ್, ಜಿತೇಶ್ ಪೂಜಾರಿ,ಸುಜಿತ್ ನಾಯಕ್, ದೂಪಕ್ ಪೂಜಾರಿ ಸೇರಿದಂತೆ ನೀರೆ ಗ್ರಾಮದ ಮೂರು ವಾರ್ಡಿನ ಎಲ್ಲಾ ಸದಸ್ಯರು ಬಿಜೆಪಿ ರಾಜೀನಾಮೆ ಸಲ್ಲಿಸಿದ್ದಾರೆ.
ಒಟ್ಟು 15 ಸದಸ್ಯ ಬಲದ ನೀರೆ ಪಂಚಾಯಿತಿಯಲ್ಲಿ 13 ಜನ ಬಿಜೆಪಿ ಬೆಂಬಲಿತ ಹಾಗೂ ಕೇವಲ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಆಗಸ್ಟ್ 18ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಯಾಗಿ ರಾಜೇಂದ್ರ ಶೆಟ್ಟಿಯವರನ್ನು ಕಣಕ್ಕಿಳಿಸಿತ್ತು. ಆದರೆ ರಾಜೇಂದ್ರ ಶೆಟ್ಟಿ ಆಯ್ಕೆಯನ್ನು ಬಿಜೆಪಿಯ ಇನ್ನೊಂದು ಬಣ ವಿರೋಧಿಸಿತ್ತು. ಆದರೆ ಈ ವಿರೋಧಕ್ಕೆ ಬಿಜೆಪಿ ನಾಯಕರು ಸೊಪ್ಪು ಹಾಕದ ಹಿನ್ನಲೆಯಲ್ಲಿ ವಿರೋಧಿ ಬಣವು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸಚ್ಚಿದಾನಂದ ಪ್ರಭು ಅವರನ್ನು ಕಣಕ್ಕಿಳಿಸಿತ್ತು. ಆದರೆ ಈ ಬಿಕ್ಕಟ್ಟು ಪಕ್ಷದ ಪ್ರಮುಖರ ವೇದಿಕೆಯಲ್ಲಿ ಬಗೆಹರಿಯದ ಕಾರಣದಿಂದ ಚುನಾವಣೆ ನಡೆದು ಅಂತಿಮವಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ರಾಜೇಂದ್ರ ಶೆಟ್ಟಿ ಕೇವಲ 6 ಮತಗಳನ್ನು ಪಡೆದು ಪರಾಭವಗೊಂಡರೆ, ಬಂಡಾಯ ಅಭ್ಯರ್ಥಿ ಸಚ್ಚಿದಾನಂದ ಪ್ರಭು 9 ಮತಗಳನ್ನು ಪಡೆದು ಮೂರು ಮತಗಳ ಅಂತರದಲ್ಲಿ ಜಯಶಾಲಿಯಾಗಿದ್ದರು.

ಬೈಲೂರು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಬಿಜೆಪಿಯಲ್ಲಿ ಎರಡು ಬಣ ಸೃಷ್ಟಿಯಾಗಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎರಡು ಬಣಗಳಿಂದ ಬಿಜೆಪಿಯ ಒಳಜಗಳ ಬೂದಿಮುಚ್ಚಿದ ಕೆಂಡದAತಿತ್ತು.ಪಕ್ಷದ ಹಾಗೂ ಪಂಚಾಯಿತಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಬಣಗಳ ನಡುವೆ ತಿಕ್ಕಾಟ ಜೋರಾಗಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರ ಬಣಗಳ ನಡುವಿನ ಒಳಜಗಳ ಬಿಜೆಪಿ ಪಕ್ಷದ ಪ್ರಮುಖರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಬಹುಮತವಿದ್ದರೂ ಕುಕ್ಕುಂದೂರು ಪಂಚಾಯಿತಿ ಆಡಳಿತವನ್ನು ಕಳೆದುಕೊಂಡ ಬೆನ್ನಲ್ಲೇ ಉಳಿದ ಕಡೆಗಳಲ್ಲಿ ಭಿನ್ನಮತದ ಬೇಗುದಿಯಲ್ಲಿ ಬಿಜೆಪಿ ಬೆಂದುಹೋಗಿದೆ.ಸಧ್ಯಕ್ಕೆ ಬಿಜೆಪಿ ಭಿನ್ನಮತ ತಾರಕಕ್ಕೇರಿದ್ದು, ಇದು ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.

 

Leave a Reply

Your email address will not be published. Required fields are marked *