ಮಂಗಳೂರು: ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ನೀಡಿದರೂ ನೈತಿಕ ಪೊಲೀಸ್ಗಿರಿ ನಿಲ್ಲುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲ್ಯಾಟ್ನಲ್ಲಿ ವಿದ್ಯಾರ್ಥಿ ಮೇಲೆ ಸ್ವಧರ್ಮೀಯ ಯುವಕರೇ ನೈತಿಕ ಪೊಲೀಸ್ಗಿರಿ ಮಾಡಿದ್ದಾರೆ.
ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಇಬ್ರಾಹಿಂ ಫಾಹಿಂ (18) ಹಲ್ಲೆಗೊಳಗಾದ ಯುವಕ.ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ ಅನ್ನು ಹುಡುಗಿ ವಿಚಾರಕ್ಕೆ ಅಪಹರಿಸಿ ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿದ್ದಾರೆ.
ಇದರಿಂದ ತೀರ್ವವಾಗಿ ಗಾಯಗೊಂಡ ಇಬ್ರಾಹಿಂ ಫಾಹಿಂ ಅನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾನ್, ತಬೀಶ್ ಸೇರಿ ಹಲವರು ಇಬ್ರಾಹಿಂ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬAಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.