ಕಾರ್ಕಳ:ದಲಿತ ಮಹಿಳೆಯ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿ ಬಳಸಿ ಕೃಷಿ ನಾಶ ಮಾಡಿ ಜಾತಿನಿಂದನೆ ಹಾಗೂ ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ಪಿಡಿಓ ಸೇರಿ ಮೂವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಳ ಗ್ರಾಮದ ಮುಗೇರ್ಕಳ ಎಂಬಲ್ಲಿನ ಪರಿಶಿಷ್ಟ ಜಾತಿಯ ಕಮಲ ಎಂಬ ದಲಿತ ಮಹಿಳೆಗೆ ಸೇರಿದ ಜಾಗಕ್ಕೆ ಆರೋಪಿಗಳಾದ ಸುದೇಶ್ ಶೆಟ್ಟಿ, ಪಂಚಾಯಿತಿ ಪಿಡಿಓ ಶ್ರೀನಿವಾಸ ಹಾಗೂ ಪಂಚಾಯಿತಿ ಕಾರ್ಯದರ್ಶಿ ಅಶೋಕ್ ಸೇರಿ ಶುಕ್ರವಾರ ಸಂಜೆ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿಯಿಂದ ರಸ್ತೆ ಅಗೆದು, ಕೃಷಿ ಹಾಗೂ ಬೇಲಿಯನ್ನು ನಾಶಪಡಿಸಿದ್ದು,ಇದನ್ನು ತಡೆಯಲು ಬಂದ ಕಮಲ ಎಂಬವರಿಗೆ ಜಾತಿನಿಂದನೆ ಮಾಡಿ ಜನರು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಕಮಲ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.