ಮೂಡುಬಿದಿರೆ : ತಾಲೂಕಿನ ಪಾಲಡ್ಕ ಗ್ರಾ ಪಂ ವ್ಯಾಪ್ತಿಯಲ್ಲಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಪಾಲಡ್ಕದ ಪೂಪಾಡಿಕಲ್ ಬ್ರಹ್ಮಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪಾಲಡ್ಕ ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ್ ಹಾಗೂ ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ದಿನೇಶ್ ಕಾಂಗ್ಲಾಯ್, ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ,
ಪಿ ಡಿ ಒ ರಕ್ಷಿತಾ ಡಿ, ಪಂಚಾಯತ್ ಸದಸ್ಯರಾದ ಜಗದೀಶ್ ಕೋಟ್ಯಾನ್, ಅಮಿತಾ ನಾಗೇಶ ಪೂಜಾರಿ,ಕಾಂತಿ ಉದಯ ಶೆಟ್ಟಿ,ಸುರೇಶ್ ಪೂಜಾರಿ, ಸವಿತಾ ಸುರೇಶ್ ಪೂಜಾರಿ, ಸುಧೀರ್ ಶೆಟ್ಟಿ, ರಂಜಿತ್ ಭಂಡಾರಿ, ಮಾಜಿ ತಾಲ್ಲೂಕು ಅಧ್ಯಕ್ಷೆ ಸವಿತಾ ಟಿ ಯನ್, ಕಡಂದಲೆ ನಿವೃತ್ತ ಶಿಕ್ಷಕ
ಟಿ ಎನ್ ಕೆಂಬಾರೆ, ಗುರುನಾರಾಯಣ ಸೇವಾ ಸಂಘದ ಉಪಾಧ್ಯಕ್ಷ ಲೀಲಾಧರ್ ಪೂಜಾರಿ, ಗೌರವಾಧ್ಯಕ್ಷನಾರಾಯಣ ಪೂಜಾರಿವಕೊರಂಗಾಲ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಚಾಲನೆ ಬಳಿಕ ಸುಮಾರು ಐನೂರು ಮಂದಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಮೈಸೂರಿನಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿದರು.