ಬೆಂಗಳೂರು: ರಾಜ್ಯ ಸಚಿವ ಸಂಪುಟದ ಎಲ್ಲಾ 33 ಸಚಿವರಿಗೂ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ತಲಾ 30 ಲಕ್ಷ ರೂಪಾಯಿ ಮೌಲ್ಯದ ಹೊಸ ಇನೋವಾ ಹೈಕ್ರಾಸ್ ಹೈಬ್ರೀಡ್ ಕಾರುಗಳ ಖರೀದಿಗೆ ಸರ್ಕಾರ ಆದೇಶಿಸಿದ್ದು,ಸಚಿವರಿಗೆ ಸಧ್ಯವೇ ಕಾರು ಭಾಗ್ಯ ಸಿಗಲಿದೆ.
ಪ್ರತೀ ಕಾರಿಗೆ ಜಿಎಸ್‌ಟಿ ಸೇರಿದಂತೆ ಶೋರೂಮ್ ಬೆಲೆ 30 ಲಕ್ಷ ರೂ.ನಂತೆ ಒಟ್ಟು 9.90 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ.
ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಿರ್ಲೋಸ್ಕರ್ ಮೋಟಾರ್ಸ್ ಅವರಿಂದ ನೇರವಾಗಿ ಖರೀದಿಸಲು ಪಾರದರ್ಶಕತೆ ಅಧಿನಿಯಮದಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ನೀಡಿದೆ.
ಈಗಾಗಲೇ ಸರ್ಕಾರವು ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಹರಸಾಹಸಪಡುತ್ತಿದ್ದು ಈ ಮಧ್ಯೆ ಸಚಿವರಿಗೆ ದುಬಾರಿ ವೆಚ್ಚದ ಐಷಾರಾಮಿ ಹೊಸ ಕಾರು ಖರೀದಿ ಅಗತ್ಯವಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.