ಕಾರ್ಕಳ: ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು ಸದಾನಂದ ಆಚಾರ್ಯರ ಸಂಯೋಜನೆಯ 4 ನೇ ವರ್ಷದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಗಾನ ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರನ್ನು ಹಾಗೂ ಬಜಗೋಳಿಯ ಸಾಯಿ ಜ್ಯುವೆಲ್ಲರ್ಸ್ ನ ಪ್ರಸಾದ್ ಸಿ ಆಚಾರ್ಯರನ್ನು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ಮೂಡಬಿದಿರೆಯ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ಚಿನ್ನದ ಉಂಗುರ ತೊಡಿಸಿ ಯಕ್ಷತೀರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಾರಾವಿ ಕೃಷ್ಣ ತಂತ್ರಿಯವರು ಅಧ್ಯಕ್ಷತೆ ವಹಿಸಿದ್ದರು.
ಡಾ. ಮಹೇಶ್ ಕುಮಾರ್ ಸಾಣೂರು ಮತ್ತು ದಾಮೋದರ ಶರ್ಮ ಬಾರ್ಕೂರು ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ನಿರಂಜನ್ ಜೈನ್ ನಾರಾವಿ, ಬೆಳುವಾಯಿ ಎಸ್. ಕೆ. ಎಫ್. ನ ಅಧ್ಯಕ್ಷ ಡಾ. ರಾಮಚಂದ್ರ ಆಚಾರ್ಯ, ವಾಮನ ಆಚಾರ್ಯ ನೂರಾಳ್ ಬೆಟ್ಟು, ಗಣೇಶ ಆಚಾರ್ಯ ಗಂಗೆನೀರು, ಉಪಸ್ಥಿತರಿದ್ದರು.
ಮುನಿಯಾಲು ಪುರಂದರ ಪುರೋಹಿತ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸಂಘಟಕ ಸದಾನಂದ ಆಚಾರ್ಯ ವಂದಿಸಿದರು.
ನಂತರ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸಾರಥ್ಯದಲ್ಲಿ ಬಡಗುತಿಟ್ಟನ ಖ್ಯಾತ ಕಲಾವಿದರ ಕೂಡುವಿಕೆ ಯಲ್ಲಿ ಗದಾಯುದ್ಧ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನವಾಯಿತು.