ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ಶುಕ್ರವಾರ ನಡೆಯಿತು.
ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರವು ಕಸ್ತೂರಿ ರಂಗನ್ ವರದಿಯ ಅನುಷ್ಟಾನಕ್ಕೆ ಚಿಂತನೆ ನಡೆಸುತ್ತಿದ್ದು ಭಾರತೀಯ ಕಿಸಾನ್ ಸಂಘವು ಈಗಾಗಲೇ ತನ್ನ ಆಕ್ಷೇಪವನ್ನು ಸಲ್ಲಿಸಿದೆ. ಪ್ರತೀ ಗ್ರಾಮಗಳಲ್ಲಿ ಈ ಬಗ್ಗೆ ಚರ್ಚೆಯನ್ನು ನಡೆಸಿ ವರದಿಯಲ್ಲಿರುವ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ತೊಂದರೆಯಾಗುವ ವಿಷಯಗಳನ್ನು ಚರ್ಚಿಸುವ ಸಲುವಾಗಿ ಅಲ್ಲಲ್ಲಿ ಭಾರತೀಯ ಕಿಸಾನ್ ಸಂಘವು ಸಭೆ ನಡೆಸಲಿದೆ. ಈ ಬಗ್ಗೆ ಜನಭಿಪ್ರಾಯ ಸಂಗ್ರಹಣೆ ಹಾಗೂ ಮಾಹಿತಿ ನೀಡುವ ಸಲುವಾಗಿ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳನ್ನೊಳಗೊಂಡAತೆ ಬೃಹತ್ ಮಟ್ಟದ ಸಭೆ ನಡೆಸಲಾಗುವುದು. ಈ ಸಭೆಗೆ ಜಿಲ್ಲಾಧಿಕಾರಿಗಳನ್ನೊಳಗೊಂಡAತೆ ಸಂಬAಧಿಸಿದ ಜಿಲ್ಲೆಯ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು. ಒಟ್ಟಿನಲ್ಲಿ ರೈತರಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದರು.
ಉಡುಪಿಯಿAದ ಕಾಸರಗೋಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ಯೋಜನೆಯು ಪ್ರಾರಂಭಗೊAಡಿದ್ದು, ಈ ಯೋಜನೆಯ 400 ಕೆವಿ ಸಾಮರ್ಥ್ಯದ ಹೈಟೆನ್ಸನ್ ಸಂಪರ್ಕ ಲೈನ್‌ಗಳು ಇನ್ನಾ ಗ್ರಾಮದ ಮುಖಾಂತರ ಹಾದು ಹೋಗಲಿದೆ.ಒಂದು ವೇಳೆ ಈ ಯೋಜನೆ ಜಾರಿಗೊಂಡಲ್ಲಿ ಗ್ರಾಮದ ಸುಮಾರು ಅರ್ಧಕ್ಕಿಂತಲೂ ಹೆಚ್ಚು ಕೃಷಿ ಭೂಮಿಗಳು ನಾಶವಾಗಲಿದೆ. ಇದಕ್ಕೆ ಗ್ರಾಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮೂಲಕ ಹೋರಾಟ ನಡೆಸಲಾಗುವುದು. ಹಾಗೂ ಈ ಯೋಜನೆಯಿಂದ ಇನ್ನಾ ಗ್ರಾಮವನ್ನು ಕೈಬಿಡಬೇಕು ಎಂದು ಕಾರ್ಕಳ ಸಮಿತಿ ಒತ್ತಾಯಿಸಿದ್ದು, ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷರಾದ ನವೀನ್‌ಚಂದ್ರ ಜೈನ್ ಮಾತನಾಡಿ, ಇತ್ತೀಚೆಗೆ ನಡೆದ ಜಿಲ್ಲಾ ಅಭ್ಯಾಸವರ್ಗದ ಮಾಹಿತಿ ನೀಡಿ, ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿರುವ ಸದಸ್ಯತನ ಅಭಿಯಾನದಲ್ಲಿ ತಾಲೂಕಿನಲ್ಲಿ ಕನಿಷ್ಟ 20 ಸಾವಿರ ಸದಸ್ಯತನವನ್ನು ಮಾಡಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಮುನಿಯಾಲು, ಉಪೇಂದ್ರ ನಾಯಕ್ ಮರ್ಣೆ, ಕೆ.ಪಿ.ಭಂಡಾರಿ ಕೆದಿಂಜೆ, ಕಾರ್ಯದರ್ಶಿ ಶಿವಪ್ರಸಾದ್ ಭಟ್ ದುರ್ಗಾ ಹಾಗೂ ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರೂಪಿಸಿದರು.