Share this news

ಶ್ರೀಹರಿಕೋಟಾ: ಕಳೆದ ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಯನ್ನು ಉಡಾವಣೆ ಮಾಡುವ ವೇಳೆ ಕೌಂಟ್ ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ 50 ವರ್ಷ ವಯಸ್ಸಾಗಿತ್ತು. ಇಸ್ರೋದಲ್ಲಿ ರಾಕೆಟ್ ಉಡಾವಣೆ ಸಮಯದಲ್ಲಿ ಕೌಂಟ್ ಡೌನ್ ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಲರ್ಮತಿ ಅವರು ಚಂದ್ರಯಾನ-3 ಸೇರಿದಂತೆ ಇಸ್ರೋ ಕೈಗೊಂಡ ಅನೇಕ ಪ್ರಯೋಗಗಳ ಉಸ್ತುವಾರಿ ವಹಿಸಿದ್ದರು. ಜುಲೈ 14ರಂದು ಯಶಸ್ವಿಯಾದ ಚಂದ್ರಯಾನ -3 ಉಡಾವಣೆಯು ಅವರ ಕೊನೆಯ ಧ್ವನಿಯಾಗಿತ್ತು. ಕೌಂಟ್ ಡೌನ್ ಕರ್ತವ್ಯವನ್ನು ತಮ್ಮ ಗಂಭೀರ ಧ್ವನಿಯಿಂದ ನಿರ್ವಹಿಸಿದ ವಿಜ್ಞಾನಿ ವಲರ್ಮತಿ ಅವರು ಶನಿವಾರ ರಾತ್ರಿ ಚೆನ್ನೈ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದರು.

ತಮಿಳುನಾಡಿನ ಅರಿಯಲೂರಿನಲ್ಲಿ 1959ರಲ್ಲಿ ಜನಿಸಿದ ವಲರ್ಮತಿ ಅವರು 1984 ರಿಂದ ಇಸ್ರೋ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಸ್ರೋದಲ್ಲಿ ಉಡಾವಣೆಯಾದ ರಾಕೆಟ್ ಪ್ರಯೋಗಗಳ ಉಡಾವಣೆ, ಕ್ಷಣಗಣನೆಯನ್ನು ಅವರು ಹೇಳುತ್ತಿದ್ದರು. ಹೀಗಾಗಿ ಅವರ ವಿಶಿಷ್ಟ ಧ್ವನಿ ದೇಶದ ಜನರಿಗೆ ಚಿರಪರಿಚಿತವಾಗಿದೆ. ಅವರು 2015ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಪಡೆದಿದ್ದರು . ಇಸ್ರೋದಿಂದ ನಿವೃತ್ತರಾದ ಅವರು ಶನಿವಾರ ರಾತ್ರಿ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *