Share this news

ಕಾರ್ಕಳ: ಹಣದ ವಿಚಾರವಾಗಿ ಮೂವರು ವ್ಯಕ್ತಿಗಳು ವ್ಯಕ್ತಿಯೊಬ್ಬರನ್ನು ಕರೆದೊಯ್ದು ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕಾರ್ಕಳ ತಾಲೂಕು ಇವತ್ತೂರಿನಲ್ಲಿ ನಡೆದಿದೆ.

ಮಿಯ್ಯಾರು ಕೊಂಕಣಾರಬೆಟ್ಟು ನಿವಾಸಿ ಜಗದೀಶ್ ಪೂಜಾರಿ ಎಂಬವರು ರೆಂಜಾಳದ ಪ್ರಕಾಶ್ ಮೆಂಡೋನ್ಸಾ ಎಂಬವರಿಗೆ ಕಳೆದ 12 ವರ್ಷಗಳ ಹಿಂದೆ ರೂ. 1,50,000 ಹಣವನ್ನು ಸಾಲವಾಗಿ ನೀಡಿದ್ದು ಹಣದ ಶ್ಯೂರಿಟಿಗಾಗಿ ಪ್ರಕಾಶ್ ಅವರಿಂದ ಖಾಲಿ ಚೆಕ್ ಪಡೆದುಕೊಂಡಿದ್ದರು. ಪ್ರಕಾಶ್ ಅವರು ಪಡೆದುಕೊಂಡ ಸಾಲವನ್ನು ಹಿಂತಿರುಗಿಸದ ಕಾರಣ ಜಗದೀಶ್ ಪೂಜಾರಿ ಪ್ರಕಾಶ್ ಮೆಂಡೋನ್ಸಾ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಪ್ರಕಾಶ್ ಜಗದೀಶ್ ಅವರಿಗೆ ಒಂದು ಲಕ್ಷ ರೂ. ಹಣವನ್ನು ಹಿಂತಿರುಗಿಸಿ ಕೇಸು ವಾಪಸು ಪಡೆಯುವಂತೆ ವಿನಂತಿಸಿದ್ದರು. ಆದರೆ ಜಗದೀಶ್ ಅವರು ಉಳಿದ 50,000 ಹಣವನ್ನು ವಾಪಸು ನೀಡಿದ ಬಳಿಕ ತಾನು ಕೇಸು ಹಿಂಪಡೆಯುವುದಾಗಿ ಹೇಳಿದ್ದರು.

ಇದೇ ವಿಚಾರವಾಗಿ ಸೆ. 29ರಂದು ಸಂಜೆ ಜಗದೀಶ್ ಪೂಜಾರಿ ಅವರು ಇರ್ವತ್ತೂರು ಗ್ರಾಮದ ಡೈರಿಗೆ ಹಾಲು ನೀಡಲು ಹೋದ ವೇಳೆ ಅಶೋಕ್ ಕೋಟ್ಯಾನ್ ಹಾಗೂ ಸಾಣೂರು ಜಗದೀಶ್ ಪೂಜಾರಿ ಎಂಬವರು ಜಗದೀಶ್ ರವರಿಗೆ ಹಲ್ಲೆ ನಡೆಸಿ ಬಳಿಕ ಮೂರು ಮಂದಿ ಸೇರಿ ಜಗದೀಶ್ ರನ್ನು ವಾಹನದಲ್ಲಿ ಅಶೋಕ್ ಕೋಟ್ಯಾನ್ ಮನೆಗೆ ಕರೆದೊಯ್ದು ಹಲ್ಲೆ ನಡೆಸಿ ಬಳಿಕ ಅದೇ ವಾಹನದಲ್ಲಿ ವಾಪಸು ಕರೆತಂದು ಸಾಣೂರು ಗರಡಿಯ ಬಳಿ ಜಗದೀಶರನ್ನು ಇಳಿಸಿ ಪ್ರಕಾಶ್ ಮಂಡೋನ್ಸ ಮೇಲೆ ಹಾಕಿದ ಕೇಸನ್ನು ಹಿಂಪಡೆಯಬೇಕು ಅಲ್ಲದೆ ಘಟನೆ ಕುರಿತಾಗಿ ಪೊಲೀಸರಿಗೆ ದೂರು ನೀಡಿದರೆ ಕೊಂದುಬಿಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಜಗದೀಶ್ ಪೂಜಾರಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *