ಕಾರ್ಕಳ: ಬೈಲೂರು ಸಮೀಪದ ಉಮಿಕ್ಕಳಬೆಟ್ಟದಲ್ಲಿ ಸ್ಥಾಪಿಸಲಾದ ಪರಶುರಾಮ ವಿಗ್ರಹದ ನೈಜತೆ ಹಾಗೂ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕೆಂದು ಸಮಾನಮನಸ್ಕ ಹೋರಾಟಗಾರರು ಕಳೆದ ಶನಿವಾರದಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವು 5 ನೇ ದಿನಕ್ಕೆ ಕಾಲಿಟ್ಟಿದ್ದು ಈವರೆಗೂ ಜಿಲ್ಲಾಡಳಿತ ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿಲ್ಲ.
ಈ ಹಿಂದೆ ಪರಶುರಾಮನ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟವನ್ನು ಪರೀಕ್ಷಿಸಬೇಕೆಂದು ಒತ್ತಾಯಿಸಿ ಬೈಲೂರಿನ ಪರಶುರಾಮ ಥೀಮ್ ಪಾರ್ಕಿನಲ್ಲೇ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು. ಬಳಿಕ ಇವರ ಮನವಿ ಸ್ವೀಕರಿಸಿದ್ದ ಕಾರ್ಕಳ ತಹಶೀಲ್ದಾರ್ ಅನಂತಶAಕರ ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬAಧಪಟ್ಟ ಇಲಾಖೆಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು. ಈ ವೇಳೆ ಒಂದು ವಾರದ ಗಡುವು ಕೇಳಿದ್ದ ಪ್ರತಿಭಟನಾಕರರು ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದರು. ಆದರೆ ಇವರ ಮನವಿಗೆ ಜಿಲ್ಲಾಡಳಿತ ಸ್ಪಂದಿಸದ ಹಿನ್ನಲೆಯಲ್ಲಿ ಕಳೆದ ಶನಿವಾರ ಸೆಪ್ಟೆಂಬರ್ 2ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು.
ಧರಣಿ ನಿರತರು ಕೇವಲ ಪರಶುರಾಮ ಪ್ರತಿಮೆಯ ಗುಣಮಟ್ಟ ಗಾಗೂ ನೈಜತೆಯ ಕುರಿತು ಪರೀಕ್ಷೆ ನಡಸಬೇಕೆಂದು ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿ ಪ್ರತಿಮೆಯ ಪರೀಕ್ಷೆಗೆ ಅವಕಾಶ ನೀಡಿದ್ದಲ್ಲಿ ಈ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ. ಆದರೆ ಜಿಲ್ಲಾಡಳಿತ ಮಾತ್ರ ಈ ವಿಚಾರದಲ್ಲಿ ಏನೂ ಪ್ರತಿಕ್ರಿಯಿಸದೇ ಮೌನವಾಗಿರುವುದು ಸಾರ್ವಜನಿಕರಲ್ಲಿಯೂ ಗೊಂದಲಕ್ಕೆ ಎಡೆಮಾಡಿದೆ ಎಂದು ಧರಣಿನಿರತರು ಆಕ್ರೋಶ ಹೊರಹಾಕಿದ್ದಾರೆ.