Share this news

ಅಜೆಕಾರು : ಕಾರ್ಕಳ ತಾಲೂಕಿನ ಅಜೆಕಾರು ಮುಖ್ಯರಸ್ತೆಯಲ್ಲಿರುವ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ನಾಳೆ (ಸೆ.8ರಂದು) ಅಂಬಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಳ್ಳಲಿದೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ಅಂಬಾ ಮೋಟಾರ್ ಡ್ರೈವಿಂಗ್ ಸ್ಕೂಲ್ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಾದ ಅಂಬಾ ಮೋಟಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಲಘು ವಾಹನ ಚಾಲನೆ ಹಾಗೂ ದ್ವಿಚಕ್ರ ವಾಹನ ಸವಾರಿ ತರಬೇತಿ ನೀಡಲಾಗುತ್ತದೆ.
ನುರಿತ ಅನುಭವಿ ಚಾಲಕರಿಂದ ಉತ್ತಮ ಚಾಲನಾ ತರಬೇತಿ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಅನುಭವಿ ಮಹಿಳೆಯರಿಂದಲೇ ದ್ವಿಚಕ್ರ ವಾಹನದ ತರಬೇತಿ ನೀಡಲಾಗುವುದು.
ಸಾರ್ವಜನಿಕರಿಗೆ ಕ್ಲಪ್ತ ಸಮಯದಲ್ಲಿ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಆರಂಭಿಸಿರುವ ಸಂಸ್ಥೆಯನ್ನು ಪ್ರೋತ್ಸಾಹಿಸುವಂತೆ ಮಾಲಕರಾದ ಪ್ರಸಾದ್ ವಿನಂತಿಸಿಕೊಂಡಿದ್ದಾರೆ.

ಸಂಪರ್ಕ ಸಂಖ್ಯೆ : 9845853640/7259757197/9686581640

Leave a Reply

Your email address will not be published. Required fields are marked *