ಮಂಗಳೂರು :ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, ಶ್ರೀ ಸ್ವಾಮಿ ರಮಾನಂದ ಹೊಲಿಗೆ ತರಬೇತಿ ಕೇಂದ್ರ ಕೊಲ್ಯ ಇವರ ಸಹಕಾರದಲ್ಲಿ 15 ದಿನಗಳ ಕಾಲ ನಡೆದ ಬಟ್ಟೆ ಕಸೂತಿ ತಯಾರಿಕೆಯ(ಆರಿ ವರ್ಕ್ )ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ ಕೊಲ್ಯದ ಶ್ರೀ ಸ್ವಾಮಿ ರಮಾನಂದ ಹೊಲಿಗೆ ತರಬೇತಿ ಕೇಂದ್ರದಲ್ಲಿ ನಡೆಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನ , ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಸಚಿನ್ ಹೆಗ್ಡೆ ಮಾತನಾಡಿ, 15 ದಿನಗಳ ಕಾಲ ಯಶಸ್ವಿಯಾಗಿ ತರಬೇತಿ ಪಡೆದ ಮಹಿಳೆಯರಿಗೆ ಶುಭ ಹಾರೈಸಿ ತರಬೇತಿಯಿಂದ ಕಲಿತ ಕೌಶಲ್ಯವನ್ನು ಇನ್ನೂ ಉತ್ತಮಪಡಿಸಿ ಸ್ವ ಉದ್ಯೋಗ ಮಾಡುವಲ್ಲಿ ಶ್ರಮಿಸಲು ಕರೆ ನೀಡಿದರು.ಆರಿ ಎಂಬ್ರಾಯ್ಡರಿಗೆ ಹೆಚ್ಚಿನ ಬೇಡಿಕೆ ಇದ್ದು ಮನೆಯಲ್ಲಿ ಸ್ವ ಉದ್ಯೋಗ ಮಾಡಿ ಹೆಚ್ಚಿನ ಸಂಪಾದನೆ ಮಾಡಲು ಸಾಧ್ಯವಿದೆ, ಬ್ಯಾಂಕ್ ಸೌಲಭ್ಯ ಪಡೆದು ಮಹಿಳೆಯರು ಯಶಸ್ವಿ ಉದ್ದಿಮೆದಾರಾಗಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ KSTA ಜಿಲ್ಲಾ ಅಧ್ಯಕ್ಷ ಜಯಲಕ್ಷ್ಯ ಕೋಟ್ಯಾನ್, KSTA ಉಳ್ಳಾಲ ವಲಯ ಅಧ್ಯಕ್ಷ ದೇವದಾಸ್, ಶ್ರೀ ಸ್ವಾಮಿ ರಮಾನಂದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ, ಶ್ರೀ ಸ್ವಾಮಿ ರಮಾನಂದ ಮಾತೃ ಮಂಡಳಿಯ ಅಧ್ಯಕ್ಷೆ ಸುಲೋಚನಿ,ಅಮೂಲ್ಯ ಹಣಕಾಸು ಸಾಕ್ಷರತೆ ಯೋಜನೆಯ ಸಮಾಲೋಚಕ ಲತೇಶ್,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ, ತರಬೇತುದಾರದಾರ ಗುಲಾಬಿ ಉಪಸ್ಥಿತರಿದ್ದರು.ದಿವ್ಯಲತಾ ಸ್ವಾಗತಿಸಿ, ವನಿತಾ ವಂದಿಸಿದರು.
15 ದಿನಗಳ ಕಾಲ ತರಬೇತಿ ಪಡೆದ ಸೋಮೇಶ್ವರ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತಲಿನ ಊರಿನ ಸುಮಾರು 35 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.