ಕಾರ್ಕಳ : ಜೇಸಿಐ ಕಾರ್ಕಳ ರೂರಲ್ ವತಿಯಿಂದ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕಳೆದ 24 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಮುಖ್ಯ ಶಿಕ್ಷಕಿ ವೇದಾವತಿ ಎನ್ ರವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳ ರೂರಲ್ ನ ಅಧ್ಯಕ್ಷ ಜೇಸಿ ಮಂಜುನಾಥ್ ಕೋಟ್ಯಾನ್ ,ಸೀನಿಯರ್ ಮೇಂಬರ್ ಅಸೋಸಿಯೇಷನ್ ನ ವಲಯಾಧ್ಯಕ್ಷ ಜೇಸಿ ಸತೀಶ್ ಪೂಜಾರಿ, ಪೂರ್ವಾಧ್ಯಕ್ಷೆ ಜೇಸಿ ವೀಣಾ ರಾಜೇಶ್, ಉಪಾಧ್ಯಕ್ಷ ಜೇಸಿ ತಾರನಾಥ್ ಕೋಟ್ಯಾನ್,ಜೇಸಿ ಸಂಗೀತಾ,ಜೇಸಿ ಸುಧೀರ್,ಜೇಸಿಲೆಟ್ ದಿಯಾ, ರಿಯಾ ಹಾಗೂ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.