ಅಜೆಕಾರು: ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರಿನಲ್ಲಿ ಬೈಕ್ ಮತ್ತು ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಿರಣ್ ಕುಮಾರ್ ಪಿ ಎಂಬವರು ಕಾರಿನಲ್ಲಿ ಮಂಗಳೂರಿನಿಂದ ಅಜೆಕಾರು ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುತ್ತಿದ್ದ ವೇಳೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಜುಮ್ಮಾ ಮಸೀದಿಯ ಬಳಿ ಎದುರುಗಡೆಯಿಂದ ಬಂದ ರಚನ್ ಎಂಬವರ ಬೈಕ್ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಕಾರು ಮತ್ತು ಬೈಕ್ ಗಳೆರಡು ಜಖಂಗೊಂಡಿದ್ದು ಬೈಕ್ ಸವಾರ ರಚನ್ ಗಾಯಗೊಂಡಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





