ನವದೆಹಲಿ:ಇಮಾಮಿ ಸಮೂಹದ ಎಎಂಆರ್‌ಐ ಹಾಸ್ಪಿಟಲ್ಸ್ ಲಿಮಿಟೆಡ್‌ನ ಶೇ 84ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಮಣಿಪಾಲ್ ಹಾಸ್ಟಿಟಲ್ಸ್ ತಿಳಿಸಿದೆ.
ಎಎಂ ಆರ್ ಐ ಆಸ್ಪತ್ರೆಯ ವೈದ್ಯಕೀಯ ಪರಿಣಿತಿ ಮತ್ತು ಮೂಲ ಸೌಕರ್ಯಗಳು ಹಾಗೂ ಮಣಿಪಾಲ್ ಆಸ್ಪತ್ರೆಯ ಅತಿ ದೊಡ್ಡ ಜಾಲಗಳು ಸಮ್ಮಿಲನದಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಿದೆ.
ಇಮಾಮಿ ಸಮೂಹವು ಎಎಂಆರ್‌ಐ ಹಾಸ್ಪಿಟಲ್ಸ್‌ನಲ್ಲಿ ಶೇ 15ರಷ್ಟು ಷೇರುಪಾಲು ಉಳಿಸಿಕೊಳ್ಳಲಿದ್ದು, ಹೂಡಿಕೆದಾರ ಆಗಿ ಮುಂದುವರಿಯಲಿದೆ.ಪೂರ್ವ ಬಾಗದಲ್ಲಿ ಮಣಿಪಾಲ್ ಹಾಸ್ಟಿಟಲ್ಸ್‌ನ ವಹಿವಾಟು ವಿಸ್ತರಣೆಗೆ ಈ ಸ್ವಾಧೀನವು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪಶ್ಚಿಮ ಬಂಗಾಳ ಸರ್ಕಾರವು ಎಎಂಆರ್‌ಐ ಹಾಸ್ಪಿಟಲ್ಸ್‌ನಲ್ಲಿ ಶೇ 1ರಷ್ಟು ಷೇರುಪಾಲನ್ನು ಹೊಂದಿದೆ ಎಂದು ಹೇಳಿದೆ.
ಎಎಂ ಆರ್‌ಐ ಭಾರತದಲ್ಲಿ ಅತ್ಯುತ್ತಮವಾದ ಆರೋಗ್ಯ ಸೇವೆಗಳೊಂದಿಗೆ ಜನರಿಗೆ ಹತ್ತಿರವಾಗಿದೆ. ಇಲ್ಲಿನ ವೈದ್ಯರು ಸಿಬ್ಬಂದಿ ವರ್ಗ ನಿರಂತರವಾಗಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಎಎಂ ಆರ್‌ಐ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ವಾರ್ಷಿಕ 5 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಪೂರ್ವ ಭಾರತದಲ್ಲಿ ಅತಿ ದೊಡ್ಡ ಆರೋಗ್ಯ ಸೇವೆ ಪೂರೈಕೆದಾರರ ಜಾಲ ಹೊಂದಿದೆ. ಧಕುರಿಯಾ, ಮುಕುಂದಪುರ ಮತ್ತು ಸಾಲ್ಟ್ ಲೇಕ್, ಒಡಿಶಾದ ಭುವನೇಶ್ವರದಲ್ಲಿ 1,200ಕ್ಕೂ ಹೆಚ್ಚಿನ ಹಾಸಿಗೆ, 800 ವೈದ್ಯರು ಹಾಗೂ 5 ಸಾವಿರಕ್ಕೂ ಅಧಿಕ ಆರೋಗ್ಯ ವೃತ್ತಿಪರರನ್ನು ಒಳಗೊಂಡಿದೆ ಎಂದು ಇಮಾಮಿ ಗ್ರೂಪ್ ನಿರ್ದೇಶಕ ಆದಿತ್ಯ ಅಗರವಾಲ್ ಹಾಗೂ ಮನೀಶ್ ಗೋಯೆಂಕ ಮಾಹಿತಿ ನೀಡಿದ್ದಾರೆ.
























