ಉತ್ತರಕನ್ನಡ: ಜಿಲ್ಲೆಯ ಸಿದ್ಧಾಪುರದ ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ್ ಹೆಮ್ಮನಬೈಲ್(57) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಡಗುತಿಟ್ಟಿನ ಮೇರು ಕಲಾವಿದರ ಪೈಕಿ ರಾಮಚಂದ್ರ ನಾಯ್ಕ್ ಒಬ್ಬರಾಗಿದ್ದು,ಬಯಲಾಟದ ಮೇಳದಿಂದ ಹಿಡಿದು ಡೇರೆ ಮೇಳದವರೆಗೆ ಯಕ್ಷರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ್ ತಮ್ಮ ಅದ್ಬುತ ಯಕ್ಷಗಾನ ಭಾಗವತಿಕೆಯ ಮೂಲಕ ಅಪಾರ ಯಕ್ಷ ಅಭಿಮಾನಿಗಳ ಮನಸ್ಸು ಗೆದ್ದಿದ್ದರು.
ಕೇವಲ ಭಾಗವತರಾಗಿ ಅಷ್ಟೇ ಅಲ್ಲದೇ ಕೃತಿ ರಚನಾಕಾರರೂ ಆಗಿದ ಹಲವು ಕೃತಿಗಳನ್ನು ಪರಿಚಯಿಸಿದ್ದಾರೆ.ರಾಮಚಂದ್ರ ನಾಯ್ಕ್ ಅವರು ಸಾಲಿಗ್ರಾಮ ಮೇಳ, ಸಿಗಂದೂರು ಮೇಳ ಹಾಗೂ ವಿವಿಧ ಬಯಲಾಟ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದು, ಇಂತಹ ಮೇರು ವ್ಯಕ್ತಿತ್ವದ ಭಾಗವತ ರಾಮಚಂದ್ರ ನಾಯ್ಕ್ ಅವರ ಅಕಾಲಿಕ ನಿಧನದಿಂದ ಯಕ್ಷರಂಗವು ಓರ್ವ ಮಹಾನ್ ಕಲಾವಿದನನ್ನು ಕಳೆದುಕೊಂಡAತಾಗಿದೆ