ಮೂಡಬಿದಿರೆ :ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಡ ಶಾಲೆಯಲ್ಲಿ ಶ್ರೀ ಕ್ಷೇ ಧ ಗ್ರಾ ಯೋಜನೆಯ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸರ್ವೋದಯ ಶಾಲೆಯ ಶಿಕ್ಷಕ, ರಾಜ್ಯ ಮಟ್ಟದ ತರಬೇತುದಾರರಾದ ಗುರು ಯಂ ಪಿ ಅವರು 30ನಿಮಿಷಗಳ ಕಾಲ ಮಕ್ಕಳಿಗೆ ಹಾಡು ಹಾಡಿಸುವ ಜೊತೆಗೆ ಸಂಸ್ಕಾರ ದುಶ್ಚಟಗಳ ಕುರಿತು ಜಾಗ್ರತಿ ಮೂಡಿಸಿದರು ಮಕ್ಕಳ ಉತ್ತಮ ಅಭ್ಯಾಸದ ಜೊತೆಗೆ ಆಹಾರದ ಬಗ್ಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಬ್ರಮಣ್ಯ ಶಾಲೆಯ ಮುಖ್ಯಶಿಕ್ಷಕ ದಿನಕರ ಕುಂಭಾಶಿ ಮಾತನಾಡಿ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಯೋಜನೆಗೆ ನಮ್ಮ ಸಹಕಾರ ಇರುತ್ತದೆ ಎಂದರು.
ಯೋಜನೆಯ ವಲಯಾಧ್ಯಕ್ಷ ಹಾಗೂ ಒಕ್ಕೂಟದ ಅಧ್ಯಕ್ಷ ಜಗದೀಶ್ ಕೋಟ್ಯಾನ್ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿ ಸರಕಾರದ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ಸುನಿತಾ ನಾಯ್ಕ್ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು.
ಶಿಕ್ಷಕ ಸುಧಾಕರ್ ಸ್ವಾಗತಿಸಿದರು.ವಲಯದ ಮೇಲ್ವಿಚಾರಕಿ ಪುಷ್ಪ ಕಾರ್ಯಕ್ರಮ ನಿರೂಪಿಸಿದರು ಸೇವಾ ಪ್ರತಿನಿಧಿ ವಸಂತಿ ವಂದನಾರ್ಪಣೆಗೈದರು.