Share this news

ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜು ಕಾರ್ಕಳ ಇದರ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದಯ ಕುಮಾರ್ ಹೆಗ್ಡೆ ಮಾತನಾಡಿ, ಸಮಾಜದ ಸ್ವಾಸ್ಥ್ಯವನ್ನು ಸಮೃದ್ಧವಾಗಿರಿಸಲು ವಿದ್ಯಾರ್ಥಿಗಳು ಪಣತೋಡಬೇಕೆಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಸಂತೋಷ್ ಶೆಟ್ಟಿ ಮಾತನಾಡಿ, ಮೌಲ್ಯಯುತ ಶಿಕ್ಷಣ, ಸಂಸ್ಕಾರಯುತ ಬದುಕು, ದುಶ್ಚಟರಹಿತ ಬದುಕು ಇವು ನಮ್ಮ ಜೀವನವನ್ನು ಹಸನಾಗಿಸುತ್ತದೆ ಎಂದರು.

ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಬಿರಾಧಿಕಾರಿ ನಂದಕುಮಾರ್ ಇವರು ಮಧ್ಯಪಾನ, ತಂಬಾಕು, ಡ್ರಗ್ಸ್‌ಗಳು ನಮ್ಮ ಜೀವನವನ್ನು ಹೇಗೆ ಹಾಳು ಮಾಡುತ್ತವೆ ಹಾಗೂ ಅವುಗಳ ದುಷ್ಪಾರಿಣಾಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ, ಯುವ ಪೀಳಿಗೆಯ ಮೊದಲ ಶತ್ರು ಮಾದಕ ವಸ್ತುಗಳು, ಈ ಮಾದಕ ವಸ್ತುಗಳನ್ನು ತ್ಯಜಿಸಿದರೆ ಜಗತ್ತನ್ನೇ ಜಯಿಸಬಹುದೆಂದರು.

.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಘವೇಂದ್ರ ಬಿ. ರಾವ್, ಚಂದ್ರಕಾಂತ್ ಹಾಗೂ ಎನ್ ಎಸ್ ಎಸ್ ಯೋಜನಾಧಿಕಾರಿ ಉಮೇಶ್ ಮತ್ತಿತರಿದ್ದರು.
ಚಂದ್ರಕಾಂತ್ ಸ್ವಾಗತಿಸಿ, ಕಾರ್ಕಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕರಾಗಿರುವ ಗೀತಾ ಹೆಗ್ಡೆ ವಂದಿಸಿದರು.ಉಪನ್ಯಾಸಕರಾದ ತಿಪ್ಪೆಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *