ಕಾರ್ಕಳ:ಎಳ್ಳಾರೆ ಇರ್ವತ್ತೂರು ಮಹಾತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಮುಷ್ಠಿ ಕಾಣಿಕೆ ಸಮರ್ಪಣೆ, ಗಣಯಾಗ, ಮೃತ್ಯುಂಜಯ ಹೋಮ ಭಾನುವಾರ ನಡೆಯಿತು.
ತಂತ್ರಿಗಳಾದ ವೇದಮೂರ್ತಿ ಶ್ರೀ ರಾಮಕೃಷ್ಣ ತಂತ್ರಿ ಕುಕ್ಕಿಕಟ್ಟೆ ಇವರ ನೇತೃತ್ವದಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ, ಗಣಯಾಗ,ಮೃತ್ಯುಂಜಯ ಹೋಮ ನಡೆಯಿತು.
ಸಾವಿರಾರು ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವರಿಗೆ ಮುಷ್ಠಿ ಕಾಣಿಕೆ ಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಅರ್ಚಕ ವರ್ಗ, ಊರವರು, ಭಕ್ತಾ ಅಭಿಮಾನಿಗಳು ಉಪಸ್ಥಿತರಿದ್ದರು.
